770 ಕೋಟಿ ರೂ.ಸಾಲ ಪಡೆಯಲು ಮುಂದಾದ ಬಿಬಿಎಂಪಿ

ಬೆಂಗಳೂರು,ಮಾ.7-ರಸ್ತೆ ಸುಗಮ ಸಂಚಾರಕ್ಕೆ ಫ್ಲೈ ಓವರ್‍ಗಳ ನಿರ್ಮಾಣ ಹಾಗೂ ಜಂಕ್ಷನ್‍ಗಳ ನವೀಕರಣ ಕಾರ್ಯಕ್ಕೆ ಮುಂದಾಗಿರುವ ಬಿಬಿಎಂಪಿ ಯೋಜನೆಗಾಗಿ ಕೆಎಐಡಿಎಫ್‍ಸಿಯಿಂದ ಸುಮಾರು 770 ಕೋಟಿ ರೂ.ಗಳ ಸಾಲ ಮಾಡಲು ಮುಂದಾಗಿದೆ. 4 ಹೊಸ ಮೇಲ್ಸೇತುವೆ ನಿರ್ಮಾಣ ಹಾಗೂ ಹಳೆಯ 5 ಜಂಕ್ಷನ್‍ಗಳ ನವೀಕರಣ ಕಾರ್ಯ ಕೈಗೆತ್ತಿಕೊಂಡಿದ್ದು ಯೋಜನೆ ಜಾರಿ ಗಾಗಿ 770 ಕೋಟಿ ರೂ.ಗಳ ಸಾಲ ಪಡೆಯಲು ತೀರ್ಮಾನಿಸಲಾಗಿದೆ ಎಂದು ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ. ಕೆಎಐಡಿಎಫ್‍ಸಿ ಯಿಂದ ಸಾಲ ಪಡೆಯಲು ಒಪ್ಪಿಗೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. […]