ಗುರುಗ್ರಹವನ್ನು ಹಿಂದೆಂದಿಗಿಂತಲೂ ಅತಿ ಹತ್ತಿರದಲ್ಲಿ ನೋಡಬಹುದು

ಕೇಪ್ ಕ್ಯಾನವೆರಲ್, ಆ.23- ವಿಶ್ವದ ಹೊಸ ಮತ್ತು ಅತಿ ದೊಡ್ಡ ಜೇಮ್ಸ ವೆಬ್ ಬಾಹ್ಯಾಕಾಶ ದೂರದರ್ಶಕದಲ್ಲಿ ಗುರುಗ್ರಹವನ್ನು ಹಿಂದೆಂದಿಗಿಂತಲೂ ಅತಿ ಹತ್ತಿರದಲ್ಲಿ ನೋಡಬಹುದು ಎಂದು ಇಲ್ಲಿನ ವಿಜ್ಞಾನಿಗಳು ಹೇಳಿದ್ದಾರೆ. ಸೌರವ್ಯೂಹದ ಅತಿದೊಡ್ಡ ಗ್ರಹ ಗುರುವಿನ ಉತ್ತರ ಮತ್ತು ದಕ್ಷಿಣದ ಅಭೂತಪೂರ್ವ ವೀಕ್ಷಣೆಗಳು ಮತ್ತು ಸುತ್ತುತ್ತಿರುವ ಧ್ರುವ ಮಬ್ಬುಗಳನ್ನು ದೂರದರ್ಶಕ ಸೆರೆಹಿಡಿದಿದ್ದು ಆ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಗುರುಗ್ರಹದ ಗ್ರೇಟ್ ರೆಡ್ ಸ್ಪಾಟ, ಭೂಮಿಯನ್ನು ನುಂಗುವಷ್ಟು ದೊಡ್ಡ ಚಂಡ ಮಾರುತ, ಲೆಕ್ಕವಿಲ್ಲದಷ್ಟು ಸಣ್ಣ ಬಿರುಗಾಳಿಗಳ ಜೊತೆಗೆ ಪ್ರಕಾಶಮಾನವಾಗಿ ಎದ್ದು […]