ಜನರನ್ನು ಮರಳು ಮಾಡಲು ಕಾಂಗ್ರೆಸ್ ಬೀದಿ ನಾಟಕ : ಸುಧಾಕರ್ ಟೀಕೆ

ಬೆಂಗಳೂರು,ಜ.9- ಕಾನೂನು ಧಿಕ್ಕರಿಸಿ, ತುರ್ತು ಆರೋಗ್ಯದ ಸಂದರ್ಭದಲ್ಲೂ ಜನರನ್ನು ಮರಳು ಮಾಡಲು ಕಾಂಗ್ರೆಸ್ ಪಾದಯಾತ್ರೆ ಮೂಲಕ ದೊಡ್ಡ ನಾಟಕ ಮಾಡುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಟೀಕಿಸಿದ್ದಾರೆ. ಆರು ವರ್ಷಗಳ ಕಾಲ ಅಕಾರದಲ್ಲಿದ್ದ ಅವರು ಡಿಪಿಆರ್ ಸಿದ್ದಪಡಿಸಲು ಐದು ವರ್ಷ ತೆಗೆದುಕೊಂಡರು. ನಮ್ಮ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡಿ ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಸಭೆಗಳನ್ನು ನಡೆಸಿ ಅಂತಿಮ ಹಂತಕ್ಕೆ ತಂದಿದ್ದಾರೆ.ಇನ್ನೇನು ಕೆಲವೇ ದಿನದಲ್ಲಿ ಇದು ಆರಂಭವಾಗುತ್ತದೆ ಎಂದು ಅರಿತು […]