ಕಳೆಗಟ್ಟಿದ ಕಡಲೆಕಾಯಿ ಪರಿಷೆ, ಹರಿದುಬಂದ ಜನಸಾಗರ

ಬೆಂಗಳೂರು, ನ.20- ಕಾರ್ತಿಕ ಮಾಸದ ಅಂಗವಾಗಿ ಬಸವನಗುಡಿಯಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಜನಸಾಗರ ಹರಿದು ಬರುತ್ತಿದೆ. ಈ ಬಾರಿ ಕಡಲೆಕಾಯಿ ಪರಿಷೆಗೆ ಸೋಮವಾರದ ಬದಲಿಗೆ ಇಂದು ಸಂಜೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಿನ್ನೆಯಿಂದಲೇ ಪರಿಷೆ ಕಳೆಗಟ್ಟಿದ್ದು, ರಜಾ ದಿನವಾದ ಇಂದು ನಗರದ ಜನತೆ ಪರಿಷೆಗೆ ಬಂದು ದೊಡ್ಡಗಣಪತಿ ಹಾಗೂ ದೊಡ್ಡ ಬಸವಣ್ಣ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಡವರ ಬಾದಾಮಿಯನ್ನು ಖರೀದಿಸಿ ಸವಿದರು. ರಾಜ್ಯದ ವಿವಿಧ […]
ಬಸವನಗುಡಿಯಲ್ಲಿ ಕಡಲೆಕಾಯಿ ಪರೀಷೆಗೆ ನಾಳೆ ಸಿಎಂ ಚಾಲನೆ

ಬೆಂಗಳೂರು,ನ.19- ಇತಿಹಾಸ ಪ್ರಸಿದ್ದ ಬಸವನಗುಡಿಯಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಕಡಲೆಕಾಯಿ ಪರೀಷೆಗೆ ನಡೆಯುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರೀಷೆಗೆ ಚಾಲನೆ ನೀಡಲಿದ್ದಾರೆ. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಕಡಲೆಕಾಯಿ ಪರೀಷೆಗೆ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಈ ಬಾರಿ ರಾಜ್ಯ ಮತ್ತು ಹೊರರಾಜ್ಯದಿಂದಲೂ ಅಪಾರ ಪ್ರಮಾಣದಲ್ಲಿ ವ್ಯಾಪಾರಿಗಳು ಆಗಮಿಸಿದ್ದಾರೆ. ಬೆಂಗಳೂರು ಸುತ್ತಮುತ್ತಲ ಪ್ರದೇಶಗಳು ಸೇರಿ ಚಿಂತಾಮಣಿ, ಕೋಲಾರ, ಮಾಲೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಾಗಡಿ, ಹೊಸಕೋಟೆ ಮಾತ್ರವಲ್ಲದೆ ನಡೆಯ ತಮಿಳುನಾಡು, ಆಂಧ್ರಪ್ರದೇಶಗಳಿಂದ ರೈತರು […]
ಕಡಲೆಕಾಯಿ ಪರಿಷೆಯಲ್ಲಿ ಬಡವರ ಬಾದಾಮಿ ಸವಿದ ಬೆಂಗಳೂರಿಗರು

ಬೆಂಗಳೂರು, ನ.13- ಮಲ್ಲೇಶ್ವರಂನ ಕಾಡುಮಲ್ಲೇಶ್ವರ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಾನದಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆಗೆ ರಜಾದಿನವಾದ ಇಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಚಳಿಗೆ ಬಡವರ ಬಾದಾಮಿ ಸವಿದು ಸಂಭ್ರಮಿಸಿದರು. ಬಸವನಗುಡಿಯ ಮಾದರಿಯಲ್ಲೇ ಇಲ್ಲೂ ಕೂಡ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ತಮಿಳು ನಾಡು, ಆಂಧ್ರ ಪ್ರದೇಶದಿಂದ ಈ ಬಾರಿ ರೈತರು ಕಡಲೆಕಾಯಿ ಮಾರಾಟಕ್ಕೆ ಬಂದಿದ್ದು, ಹಸಿ, ಒಣ ಹಾಗೂ ಉರಿದ ಕಡಲೆಕಾಯಿ ಮಾರಾಟ ಜೋರಾಗಿತ್ತು. ಜತೆಗೆ ಮಕ್ಕಳ ಆಟಿಕೆ, […]