ವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರು ಬಂಧನ

ಬೆಂಗಳೂರು,ಫೆ.4- ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹೆದರಿಸಿ ಹಣ, ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ದರೋಡೆಕೋರರನ್ನು ಬಂಧಿಸಿರುವ ಕಲಾಸಿಪಾಳ್ಯಠಾಣೆ ಪೊಲೀಸರು 45000 ರೂ. ನಗದು ಸೇರಿದಂತೆ ಒಟ್ಟು 7.20ಲಕ್ಷ ರೂ. ಮೌಲ್ಯದ 4 ದ್ವಿ ಚಕ್ರ ವಾಹನಗಳು, 25 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಟನ್ಪೇಟೆ ಸಿದ್ದಾರ್ಥ ನಗರದ ನಿವಾಸಿಗಳಾದ ಮೊಹಮ್ಮದ್ ಯುನೂಸ್ ಅಲಿಯಾಸ್ ಯುನೂಸ್ (35) ಮತ್ತು ಮೊಹ್ಮದ್ ಫಯಾಜ್(34)ಬಂಧಿತ ಆರೋಪಿಗಳು. ಗೋಂವಿದರಾಜನಗರ ಠಾಣೆ ವ್ಯಾಪ್ತಿಯಲ್ಲಿ ಚಾಕು ತೊರಿಸಿ ಸಾರ್ವಜನಿಕರನ್ನು ಬೆದರಿಸಿ ನಡೆಸಿದ್ದ […]