ಕನ್ನಡ ಮಾಧ್ಯಮ ಶಾಲೆಗಳ ಅನುದಾನಕ್ಕಾಗಿ ಪರಿಷತ್ ನಲ್ಲಿ ಪಕ್ಷಾತೀತವಾಗಿ ಧರಣಿ

ಬೆಂಗಳೂರು,ಫೆ.13- ಕನ್ನಡ ಮಾಧ್ಯಮದ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಕೆಲ ಸದಸ್ಯರು ಪಕ್ಷಾತೀತವಾಗಿ ಧರಣಿ ನಡೆಸಿದ ಪ್ರಸಂಗ ನಡೆಯಿತು. ಬೋಜನ ವಿರಾಮದ ಬಳಿಕ‌, ನಿಯಮ 330 ರ ಅಡಿ ಗಮನ ಸೆಳೆಯುವ ಸೂಚನೆಯಲ್ಲಿ ಸದಸ್ಯರು 1986-87 ರಿಂದ 1994-95ರ ನಡುವೆ ಪ್ರಾರಂಭವಾಗಿ‌‌ ಸತತವಾಗಿ ನಡೆಯುತ್ತಿರುವ ಎಲ್ಲಾ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ವೇತನಾದಾನಕ್ಕೆ ಒಳಪಡಿಸುವ ವಿಷಯ ಕುರಿತು ಪ್ರಸ್ತಾಪಿಸಿದರು. ಎಸ್.ಎಲ್.ಭೋಜೇಗೌಡ, ಕರ್ನಾಟಕದಲ್ಲಿ ಕನ್ನಡಕ್ಕೆ ಮಾನ್ಯತೆ ಇಲ್ಲವಾಗಿದೆ. […]