34 ಸಾವಿರ ಕೋಟಿ ದಿವಾನ್ ಫೈನಾನ್ಸ್ ಹಗರಣದ ತನಿಖೆ ಆರಂಭಿಸಿದ ಸಿಬಿಐ

ನವದೆಹಲಿ ಜು.19- ಬ್ಯಾಂಕ್‍ಗಳಲ್ಲಿ 34,815 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗಾಗಿ ಸಿಬಿಐ ದಿವಾನ್ ಹೌಸಿಂಗ್ ಫೈನಾನ್ಸ್ ಕಾಪೆರ್ರೇಷನ್ ಲಿಮಿಟೆಡ್‍ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ವಾಧವನ್ ಮತ್ತು ನಿರ್ದೇಶಕ ೀರಜ್ ವಾಧವನ್ ಅವರನ್ನು ಲಕ್ನೋದಿಂದ ದೆಹಲಿಗೆ ಕರೆತರಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಐದು ದಿನಗಳ ಪೊಲೀಸ್ ಕಸ್ಟಡಿಯನ್ನು ಪೂರ್ಣಗೊಳಿಸುತ್ತಿರುವ ಚೋಟಾ ಶಕೀಲ್ ಅಜಯ್ ನಾವಂದರ್‍ನನ್ನು ಆಪಾದಿತರೊಂದಿಗೆ ಮಂಗಳವಾರ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎಫ್‍ಐಆರ್‍ಗೆ ಸಂಬಂಧಿಸಿದಂತೆ ಸಿಬಿಐ ವಾಧವಾನ್‍ರನ್ನು ಕಸ್ಟಡಿಗೆ ನೀಡುವಂತೆ ಮನವಿ […]