ಯುದ್ದಪೀಡಿತ ಉಕ್ರೇನ್‍ನಿಂದ ಸೇಫಾಗಿ ರಾಜ್ಯಕ್ಕೆ ವಾಪಸ್ಸಾದ 12 ವಿದ್ಯಾರ್ಥಿಗಳು

ಬೆಂಗಳೂರು,ಫೆ.27-ಯುದ್ದಪೀಡಿತ ಉಕ್ರೇನ್‍ನಿಂದ 12 ವಿದ್ಯಾರ್ಥಿಗಳು ರಾಜ್ಯಕ್ಕೆ ಇಂದು ಮರಳಿದ್ದಾರೆ. ಉಕ್ರೇನ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ರಾಜ್ಯದ 12 ಮಂದಿ ವಿದ್ಯಾರ್ಥಿಗಳು ಮುಂಬೈ ಮೂಲಕ ಆಗಮಿಸಿದ್ದಾರೆ.ಮುಂಬೈನಿಂದ ಒಬ್ಬ ವಿದ್ಯಾರ್ಥಿ ಬೆಳಗಾವಿಗೆ ತೆರಳಿದರೆ, 11 ಮಂದಿ ವಿದ್ಯಾರ್ಥಿಗಳು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಉಕ್ರೇನ್‍ನಿಂದ ಬಂದಂತಹ ವಿದ್ಯಾಥಿಗಳನ್ನು ಕಂದಾಯ ಸಚಿವ ಆರ್.ಅಶೋಕ್ ಹಾಗೂ ನೋಡಲ್ ಅಧಿಕಾರಿ ಮನೋಜ್ ರಾಜನ್ ಸ್ವಾಗತಿಸಿದರು. ತಾಯ್ನಾಡಿಗೆ ಮರಳಿದ 11 ವಿದ್ಯಾರ್ಥಿಗಳಿಗೂ ಅಶೋಕ್ ಅವರು ಗುಲಾಬಿ ಹೂ ನೀಡಿ ಸ್ವಾಗತ ಕೋರಿದರು. […]