ನೂರಾರು ಅಡ್ಡಿ, ಮಾ.10ರ ನಂತರವೂ ಸಂಪುಟ ವಿಸ್ತರಣೆ ಡೌಟ್
ಬೆಂಗಳೂರು,ಫೆ.20- ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸಂಪುಟ ವಿಸ್ತರಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವಂತೆಯೇ, ಕೆಲ ಗಂಭೀರ ಸಮಸ್ಯೆಗಳು ಪರಿಹಾರವಾಗದೆ ಸಂಪುಟ ವಿಸ್ತರಣೆ/ಪುನಾರಚನೆಯಾಗುವ ಸಾಧ್ಯತೆಯಿಲ್ಲ ಎಂದು ಸರ್ಕಾರದ ಆಂತರಿಕ ಮಾಹಿತಿಗಳು ತಿಳಿಸಿವೆ. ಸರ್ಕಾರ ಒಂದು ವೇಳೆ ನಾಲ್ಕು ಸ್ಥಾನಗಳನ್ನು ತುಂಬಿದರೆ ಅನೇಕ ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನ ತಲೆದೋರಲಿದೆ. ದುರ್ಬಲ ಸಚಿವರನ್ನು ಕೈ ಬಿಟ್ಟು ಸಮರ್ಥರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಸಚಿವಾಕಾಂಕ್ಷಿಗಳಲ್ಲಿ ಒಬ್ಬರಾದ ಹೊನ್ನಾಳ್ಳಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಬಹಿರಂಗವಾಗಿಯೇ ಹೇಳಿದ್ದಾರೆ. ಲೈಂಗಿಕ […]