ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ ಕನ್ನಡ ಚಲನಚಿತ್ರ ರಂಗ ಬೆಂಬಲ

ಬೆಂಗಳೂರು, ಜ.7- ಮೇಕೆದಾಟು ಪಾದಯಾತ್ರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಬೆಂಬಲ ಘೋಷಿಸಿದೆ. ಡಾ.ರಾಜ್‍ಕುಮಾರ್ ಕಾಲದಿಂದಲೂ ನೆಲ-ಜಲದ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡುತ್ತಲೇ ಬಂದಿದೆ. ಹಾಗಾಗಿ ಮೇಕೆದಾಟು ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ತಿಳಿಸಿದ್ದಾರೆ. ಇದು ಪಕ್ಷಾತೀತ ಹೋರಾಟವಾಗಿರುವುದರಿಂದ ಪಾದಯಾತ್ರೆಗೆ ಬೆಂಬಲ ನೀಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಾಣಿಜ್ಯಮಂಡಳಿಗೆ ಬಂದು ಬೆಂಬಲ ಕೋರಿದರು. ಇದರಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಹಕ್ಕನ್ನು ಪ್ರತಿಪಾದಿಸಲು ನಾವು ಕೂಡ […]