ಕನ್ನಡದಲ್ಲೇ ಭಾಷಣ ಆರಂಭ ಮಾಡಿದ ರಾಜ್ಯಪಾಲರು

ಬೆಂಗಳೂರು,ಫೆ.14- ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್‍ಅವರು ಕನ್ನಡದಲ್ಲಿ ತಮ್ಮ ಭಾಷಣವನ್ನು ಆರಂಭಿಸಿದರು. ವಿಧಾನಸಭೆಯಲ್ಲಿಂದು ಆರಂಭಗೊಂಡ ಪ್ರಸಕ್ತ ವರ್ಷದ ಚೊಚ್ಚಲ ಅಧಿವೇಶನದಲ್ಲಿ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದರು. ರಾಷ್ಟ್ರಗೀತೆ ಹಾಡಿದ ಬಳಿಕ ತಮ್ಮ ಭಾಷಣ ಆರಂಭಿಸಿದ ರಾಜ್ಯಪಾಲರು, ವಿಧಾನಸಭೆ ಸಭಾಧ್ಯಕ್ಷರು, ವಿಧಾನ ಪರಿಷತ್ ಸಭಾಪತಿ ಸೇರಿದಂತೆ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಕನ್ನಡದಲ್ಲಿಯೇ ಮಾತನಾಡಿ, ಅಧಿವೇಶನಕ್ಕೆ ಸ್ವಾಗತ ಕೋರಿದರು. ನಂತರ ಹಿಂದಿಯಲ್ಲಿ ತಮ್ಮ ಭಾಷಣವನ್ನು ಮುಂದುವರೆಸಿದರು. ರಾಜ್ಯದ ರಾಜ್ಯಪಾಲರಾದ ಮೇಲೆ ಗೆಲ್ಹೋಟ್ […]