ಐಪಿಎಸ್ ಅಧಿಕಾರಿಗಳಿಗೆ ಬಡ್ತಿ

ಬೆಂಗಳೂರು, ಜ.1- ಹಿರಿಯ ಐಪಿಎಸ್ ಅಧಿಕಾರಿಗಳಾದ ಕೆ.ವಿ.ಶರತ್ಚಂದ್ರ, ಡಾ.ಪಿ.ಎಸ್. ಹರ್ಷ, ಸಂದೀಪ್ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಐಜಿಪಿ ದರ್ಜೆಯ ಅಧಿಕಾರಿಗಳಾದ ಎಸ್.ಮುರುಗನ್, ಕೆ.ವಿ.ಶರತ್ಚಂದ್ರ, ಎಂ.ನಂಜುಂಡಸ್ವಾಮಿ ಅವರನ್ನು ಎಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಿ ವರ್ಗಾಯಿಸಲಾಗಿದೆ. ಡಿಐಜಿ ದರ್ಜೆಯ ಅಧಿಕಾರಿಗಳಾದ ಡಾ.ಪಿ.ಎಸ್.ಹರ್ಷ, ವಿಕಾಸ್ಕುಮಾರ್ ವಿಕಾಸ್, ಸಂದೀಪ್ ಪಾಟೀಲ್, ಲಾಬುರಾಮ್ ಅವರಿಗೆ ಐಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಎಸ್.ಮುರುಗನ್ ಅವರನ್ನು ಬೆಂಗಳೂರಿನ ಮಾಡ್ರನೈಸೇಷನ್ ಅಂಡ್ ಲಾಜಿಸ್ಟಿಕ್ಸ್ ಕಮ್ಯುನಿಕೇಷನ್ನ ಎಡಿಜಿಪಿ ಹುದ್ದೆಗೆ ವರ್ಗಾಯಿಸಲಾಗಿದೆ. ಕೆ.ವಿ.ಶರತ್ಚಂದ್ರ ಅವರನ್ನು ಸಿಐಡಿ ಘಟಕಕ್ಕೆ […]