ಪರಿಷತ್‍ನಲ್ಲಿ ಕಾಂಗ್ರೆಸ್‍ನ ಧರಣಿ, ಗದ್ದಲದ ನಡುವೆಯೇ ಮಹತ್ವದ 4 ಮಸೂದೆಗಳು ಅಂಗೀಕಾರ

ಬೆಂಗಳೂರು,ಫೆ.22- ಕಳೆದ 2011ರಲ್ಲಿ ಕೆಪಿಎಸ್‍ಸಿಯಿಂದ ನೇಮಕಗೊಂಡು ಅಧಿಸೂಚನೆ ರದ್ದುಗೊಂಡಿದ್ದರಿಂದ ಅತಂತ್ರಕ್ಕೆ ಸಿಲುಕಿದ 362 ಮಂದಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಅನುಕೂಲವಾಗುವಂತಹ ವಿದೇಯಕವನ್ನು ವಿಧಾನಪರಿಷತ್‍ನಲ್ಲಿಂದು ಅಂಗೀಕರಿಸಲಾಯಿತು. ಕಾಂಗ್ರೆಸ್‍ನ ಧರಣಿ, ಗದ್ದಲ, ಗಲಾಟೆಯ ನಡುವೆಯೂ ಸಚಿವರು ವಿಧಾನಸಭೆಯಿಂದ ಅಂಗೀಕಾರಗೊಂಡಿದ್ದ ನಾಲ್ಕು ಮಹತ್ವದ ಮಸೂದೆಗಳನ್ನು ಪರಿಷತ್‍ನಲ್ಲಿ ಮಂಡಿಸಿದರು. ಮುಖ್ಯಮಂತ್ರಿಗಳ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ಸಿವಿಲ್ ಸೇವೆಗಳ 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ ವಿಧೇಯಕ 2022ಅನ್ನು ಮಂಡಿಸಿದರು. ಮಹಿಳೆಯೊಬ್ಬರು […]

 ಬೆಂಗಳೂರಿನಲ್ಲಿರುವ ಎಲ್ಲಾ ಫ್ಲೈಓವರ್‍ಗಳ ಮೌಲ್ಯ ಮಾಪನಕ್ಕೆ ಆಗ್ರಹ

ಬೆಂಗಳೂರು,ಫೆ.17- ಪೀಣ್ಯ ಮೇಲ್ಸೇತುವೆ ಕಳಪೆ ಎಂದು ಸಾಬೀತಾಗಿರುವ ಹಿನ್ನಲೆಯಲ್ಲಿ ನಗರದಲ್ಲಿರುವ ಎಲ್ಲ ಫ್ಲೈಓವರ್‍ಗಳ ಮೌಲ್ಯಮಾಪನ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ. ದೀರ್ಘಾವ ಆಯುಷ್ಯ ಹೊಂದಿದೆ ಎನ್ನಲಾದ ಪೀಣ್ಯ ಮೇಲ್ಸೇತುವೆ ಕಾಮಗಾರಿ ಅವಗೂ ಮುನ್ನವೇ ಕಳಪೆ ಎಂದು ಸಾಬೀತಾಗಿರುವ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ನೂರಾರು ಮೇಲ್ಸೇತುವೆಗಳ ಮೌಲ್ಯಮಾಪನ ನಡೆಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು, ಈ ವಿಷಯವನ್ನು ಅಧಿವೇಶನದ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಅವರು ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ […]

ವಿಧಾನ ಪರಿಷತ್​ನಲ್ಲಿ ಈಶ್ವರಪ್ಪ ಹೇಳಿಕೆ ಪ್ರತಿಧ್ವನಿ ; ಕಲಾಪ ಮುಂದೂಡಿಕೆ

ಬೆಂಗಳೂರು, ಫೆ.17- ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿವಾತಾತ್ಮಕ ಹೇಳಿಕೆ ಇಂದು ವಿಧಾನ ಪರಿಷತ್ ನಲ್ಲಿ ಪ್ರತಿಧ್ವನಿಸಿ ಕಲಾಪ ರಣಾಂಗಣವಾಗಿ ಮಾರ್ಪಟ್ಟಿತ್ತಲ್ಲದೆ, ಪ್ರತಿಪಕ್ಷದ ಧರಣಿ, ಆಡಳಿತ ಪಕ್ಷದ ಸಮರ್ಥನೆಯಿಂದ ಗೊಂದಲದ ಗೂಡಾಗಿ, ಮಧ್ಯಾಹ್ನಕ್ಕೆ ಮುಂದೂಡಿಕೆಯಾಗಿದೆ. ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ, ಬಂಧಿಸಬೇಕು, ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದೆ. ಇಂದು ಬೆಳಗ್ಗೆ ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ […]

ಹರಿಪ್ರಸಾದ್ ಹೇಳಿಕೆಗೆ ಕೆರಳಿದ ಬಿಜೆಪಿಗರು

ಬೆಂಗಳೂರು, ಫೆ.16- ವಿಧಾನ ಪರಿಷತ್ ನಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಬಿ,ಕೆ,ಹರಿಪ್ರಸಾದ್ ಅವರು ಆರ್.ಎಸ್.ಎಸ್ ಕಚೇರಿ ಇರುವ ನಾಗಪುರದ ಹೆಸರನ್ನು ಕನ್ನಡೀಕರಣ ಮಾಡಿ ಎಂದು ಹೇಳಿದ್ದು ಬಿಜೆಪಿಗರನ್ನು ಕೆರಳಿಸಿದ್ದು ಒಂದಷ್ಟು ಕಾಲ ಮಾತಿನ ಸಮರಕ್ಕೆ ನಾಂದಿಯಾಡಿತ್ತು. ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಕುರಿತು ನೀಡಿರುವ ಹೇಳಿಕೆಯ ವಿರುದ್ಧ ನಿಲುವಳಿ ಸೂಚನೆ ಮಂಡಿಸಿ ಪೂರ್ವ ಪ್ರಸ್ತಾವನೆ ಮಂಡಿಸಿದ ಹರಿಪ್ರಸಾದ್ ಅವರು, ನಾಗ್ಪುರದಲ್ಲಿರುವ ಆರ್ ಎಸ್ ಎಸ್ ಕಚೇರಿಯಲ್ಲಿ 52 ವರ್ಷ ರಾಷ್ಟ್ರಧ್ವಜವಾದ ತ್ರಿವರ್ಣಧ್ವಜವನ್ನೇ ಹಾರಿಸಲಿಲ್ಲ. […]

ಕೆಂಪುಕೋಟೆಯ ಮೇಲೂ ಕೇಸರಿ ಧ್ವಜ ಹಾರಿಸುವ ಹೇಳಿಕೆ ವಿಚಾರ , ಪರಿಷತ್‌ನಲ್ಲೂ ಕೋಲಾಹಲ

ಬೆಂಗಳೂರು, ಫೆ.16- ಕೆಂಪುಕೋಟೆಯ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂದಯ ಸಚಿವ ಕೆ.ಎಸ್.ಈಶ್ವರಪ್ಪ ಅವರು ನೀಡಿರುವ ಹೇಳಿಕೆ ವಿಧಾನ ಪರಿಷತ್ ನಲ್ಲಿ ಕೋಲಾಹಲಕ್ಕೆ ಕಾರಣವಾಗಿ ಕೆಲ ಕಾಲ ಅಧಿವೇಶನವನ್ನು ಮುಂದೂಡಬೇಕಾದ ಪ್ರಸಂಗ ನಡೆಯಿತು. ಹೊಸ ವರ್ಷದ ಮೂರನೇ ದಿನವಾದ ಇಂದು ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶ್ನೋತ್ತರವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಈ ಹಂತದಲ್ಲಿ ಎದ್ದು ನಿಂತ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್. ನಿಯಮ-59ನ್ನು ಆಧರಿಸಿ ನಿಲುವಳಿ ಸೂಚನೆ ನೀಡಿದ್ದೇವೆ. ಮೊದಲು ಅದರ ಪ್ರಸ್ತಾಪಕ್ಕೆ ಅವಕಾಶ […]

ಸಹಕಾರ ಇಲಾಖೆಯ ಅವ್ಯವಹಾರ ನಿಯಂತ್ರಿಸಲು ಹೊಸ ಮಾರ್ಗಸೂಚಿ : ಸಚಿವ ಸೋಮಶೇಖರ್

ಬೆಂಗಳೂರು,ಫೆ.15- ಸಹಕಾರ ಇಲಾಖೆಯಲ್ಲಿ ಖಾಸಗಿ ಲೆಕ್ಕ ಪರಿಶೋಧಕರಿಂದಾಗಿ ಕೆಲ ಅವ್ಯವಹಾರಗಳಾಗುತ್ತಿದ್ದು, ಅದಕ್ಕೆ ನಿಯಂತ್ರಣ ತರಲು ಮುಂದಿನ ಅಧಿವೇಶನದ ವೇಳೆಗೆ ಕಠಿಣ ನಿಯಮಾವಳಿಗಳನ್ನೊಳಗೊಂಡ ಹೊಸ ಮಾರ್ಗಸೂಚಿಗಳನ್ನು ರಚಿಸುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಗೆ ಅಧಿಕಾರಿಗಳ ಕೊರತೆ ಇದೆ. ಅದಕ್ಕಾಗಿ 402 ಲೆಕ್ಕ ಪರಿಶೋಧಕರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್‍ನಿಂದಾಗಿ ಯಾವುದೇ ನೇಮಕಾತಿಗೆ ಅವಕಾಶವಿರಲಿಲ್ಲ. ಮುಂದಿನ ದಿನಗಳಲ್ಲಿ ಅವಕಾಶ ಸಿಗುವ ಭರವಸೆ ಇದೆ ಎಂದರು. ಸಹಕಾರ ಇಲಾಖೆಯಲ್ಲಿ 1700 ಲೆಕ್ಕ ಪರಿಶೋಧಕರು ನೋಂದಾಯಿಸಿಕೊಂಡಿದ್ದಾರೆ. ಒಬ್ಬರು […]

ವಿಧಾನಪರಿಷತ್‍ನಲ್ಲಿ ನಟಿ ಭಾರ್ಗವಿ ನಾರಾಯಣ್ ಅವರಿಗೆ ಶ್ರದ್ದಾಂಜಲಿ

ಬೆಂಗಳೂರು,ಫೆ.15- ರಂಗಭೂಮಿ ಹಿರಿಯ ಕಲಾವಿದೆ ಹಾಗೂ ನಟಿ ಭಾರ್ಗವಿ ನಾರಾಯಣ್ ಅವರ ನೀಧನಕ್ಕೆ ವಿಧಾನಪರಿಷತ್‍ನಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಕಲಾಪ ಆರಂಭದಲ್ಲೇ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನಾ ನಿರ್ಣಯ ಮಂಡಿಸಿ, 1938 ಫೆ.4ರಂದು ಜನಿಸಿದ ಭಾರ್ಗವಿ ನಾರಾಯಣ ಅವರು, ಇಂಗ್ಲೀಷ್ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದರು.ರಂಗಭೂಮಿ ಕಲಾವಿದರಾಗಿದ್ದಾಗಲೇ ಮೇಕಪ್ ನಾಣಿ ಎಂದೇ ಹೆಸರಾಗಿದ್ದ ಬೆಳವಾಡಿ ನಂಜುಂಡಯ್ಯ ನಾರಾಯಣ ಅವರನ್ನು ಮದುವೆಯಾದರು. 60ರ ದಶಕದಲ್ಲಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಪ್ರೊಫೆಸರ್ ಹುಚ್ಚರಾಯ ಚಿತ್ರದಲ್ಲಿನ ನಟನೆಗೆ 1974ರಲ್ಲಿ […]