ಅಧಿವೇಶನಕ್ಕೆ ರಾಜ್ಯಪಾಲರಿಗೆ ರತ್ನಗಂಬಳಿ ಸ್ವಾಗತ

ಬೆಂಗಳೂರು,ಫೆ.13- ನಾಳೆಯಿಂದ ಆರಂಭವಾಗಲಿರುವ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ಅವರಿಗೆ ವಿಧಾನಸೌಧದ ಮೆಟ್ಟಿಲುಗಳ (ಗ್ರಾಂಡ್ ಸ್ಟೆಪ್ಸ್) ಮೂಲಕ ರತ್ನಗಂಬಳಿ ಸ್ವಾಗತವನ್ನು ಕೋರಲಾಗುತ್ತದೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸುವ ರಾಜ್ಯಪಾಲರನ್ನು ಗ್ರ್ಯಾಂಡ್ ಸ್ಟೆಪ್ಸ್ ಮೂಲಕವೇ ಸ್ವಾಗತಕೋರುವ ಸಂಪ್ರದಾಯ ಇತ್ತು. ಭದ್ರತೆ ಮತ್ತಿತರ ಕಾರಣಗಳಿಂದಾಗಿ ಮೆಟ್ಟಿಲುಗಳ ಮೇಲೆ ರಾಜ್ಯಪಾಲರಿಗೆ ಸ್ವಾಗತ ಕೋರುವುದನ್ನು ಬದಲಿಸಲಾಗಿತ್ತು. ಆದರೆ ಅಧಿವೇಶನಕ್ಕೆ ಆಗಮಿಸುವ ರಾಜ್ಯಪಾಲರನ್ನು ಗ್ರ್ಯಾಂಡ್ ಸ್ಟೆಪ್ಸ್ ಮೂಲಕವೇ ಸ್ವಾಗತಕೋರಲು ವಿಧಾನಸಭೆ ಸಚಿವಾಲಯ ಸಿದ್ದತೆ ನಡೆಸಿದೆ. […]