ನಾಳೆಯೇ ಅಧಿವೇಶನ ಮುಕ್ತಾಯವಾಗುವ ಸಾಧ್ಯತೆ..?
ಬೆಂಗಳೂರು,ಫೆ.20- ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ತನ್ನ ಹೋರಾಟವನ್ನು ತೀವ್ರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ವಿಧಾನಮಂಡಲದ ಉಭಯ ಸದನದ ಜಂಟಿ ಅಧಿವೇಶವನ್ನು ಅರ್ನಿಷ್ಟಾವಗೆ ಮುಂದೂಡುವ ಸಾಧ್ಯತೆ ಇದೆ. ಮಾತುಕತೆ ಅಥವಾ ಸಂಧಾನಕ್ಕೆ ಕಾಂಗ್ರೆಸ್ ನಾಯಕರು ಬಗ್ಗದೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ನಾಳೆ ಕಲಾಪವನ್ನು ಅರ್ನಿಷ್ಟಾವಗೆ ಮುಂದೂಡುವ ಸಾಧ್ಯತೆ ಇದೆ. ಒಂದು ವೇಳೆ ಕಾಂಗ್ರೆಸ್ ಸದಸ್ಯರು ತಮ್ಮ ಧರಣಿಯನ್ನು ಹಿಂತೆಗೆದುಕೊಂಡರೆ ಮಾತ್ರ ಕಲಾಪ ನಿಗದಿತ ಅವಧಿಯಂತೆ 25ರವರೆಗೆ ನಡೆಯಲಿದೆ. ನಾಳೆಯೂ ಇದೇ […]