ಚುನಾವಣೆಯಲ್ಲಿ ಗೆದ್ದರಷ್ಟೇ ಸಾಲದು ಜನರ ಮನಸ್ಸನ್ನೂ ಗೆಲ್ಲಬೇಕು : ಸಿಎಂ ಬೊಮ್ಮಾಯಿ

ಬೆಂಗಳೂರು,ಜ.5- ವಿಧಾನಪರಿಷತ್ ಹಾಗೂ ವಿಧಾನಸಭೆಗೆ ಆಯ್ಕೆ ಆಗುವಂತೆ ಜನರ ಹೃದಯದಲ್ಲಿ ಸ್ಥಾನ ಗಳಿಸುವುದೂ ಅಷ್ಟೇ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಕಾಸಸೌಧದಲ್ಲಿ ಏರ್ಪಡಿಸಿದ್ದ ವಿಧಾನಪರಿಷತ್ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ ಶಾಸನಸಭೆಗೆ ಆಯ್ಕೆಯಾದರಷ್ಟೇ ನಮ್ಮ ಕರ್ತವ್ಯ ಮುಗಿಯುವುದಿಲ್ಲ. ಆಯ್ಕೆಯಾದ ನಂತರ ಜನರ ಹೃದಯ ಗೆಲ್ಲುವಂತಹ ಕೆಲಸಗಳನ್ನು ಮಾಡಬೇಕು. ಆಗಲೇ ಜನಪ್ರತಿನಿಗಳ ಗೌರವ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು. ವಿವಿಧ ಕ್ಷೇತ್ರದ ಪ್ರಮುಖರು ವಿಧಾನ ಪರಿಷತ್‍ಗೆ ಬರುತ್ತಾರೆ, ತಮ್ಮ ಅನುಭವಗಳನ್ನು ಧಾರೆ ಎರೆಯುತ್ತಾರೆ . […]