BREAKING : ಉಕ್ರೇನ್‍ನಲ್ಲಿ ರಷ್ಯಾ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ಬಲಿ..!

ಬೆಂಗಳೂರು,ಮಾ.1-ಯುದ್ಧಪೀಡಿತ ಉಕ್ರೇನ್‍ನಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಗೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ.ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ನವೀನ್ ಶೇಖರಪ್ಪ ಎಂಬ ನತದೃಷ್ಟ ವಿದ್ಯಾರ್ಥಿಯೇ ರಷ್ಯಾದ ಕ್ಷಿಪಣಿ ದಾಳಿಗೆ ಆಹುತಿಯಾಗಿದ್ದಾನೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಇದನ್ನು ಅಕೃತಗೊಳಿಸಿದ್ದು, ಉಕ್ರೇನ್‍ನ ಕರ್ಕೀವ್‍ನಲ್ಲಿ ರಷ್ಯಾದ ಕ್ಷಿಪಣಿಗೆ ಕರ್ನಾಟಕದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದೆ. ಆದರೆ ಆತನ ಹೆಸರನ್ನು ಬಹಿರಂಗಪಡಿಸಿಲ್ಲ. ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಹರೀಂದಾವತ್ ಟ್ವೀಟ್ ಮಾಡಿದ್ದು, ಸಾವನ್ನಪ್ಪಿರುವುದನ್ನು ಖಚಿತಪಡಿಸಿದರಾದರೂ ಹೆಸರು ಮತ್ತು ವಿವರವನ್ನು […]