“ಅಮ್ಮಾ ಹಸಿವು ತಡೆಯಲಾಗುತ್ತಿಲ್ಲ ಬೇಗ ಕರೆಸಿಕೊಳ್ಳಿ”

ಹುಬ್ಬಳ್ಳಿ, ಫೆ.28- ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಬ್ರೆಡ್ ಮಾತ್ರ ತಿಂದು ದಿನ ಕಳೆದಿದ್ದೇವೆ ಅಮ್ಮಾ… ಹೊಟ್ಟೆನೋವು ತಡೆಯಲು ಆಗುತ್ತಿಲ್ಲ…ಇದು ಉಕ್ರೇನ್ನ ಹಾರ್ಕಿವ್ನ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಓದುತ್ತಿರುವ ಹುಬ್ಬಳ್ಳಿಯ ನಾಜಿಲ್ಲಾ ಬಾಬಾಜಾನ್ ಗಾಜಿಪುರ್ ಅವರು ತಮ್ಮ ತಾಯಿ ನೂರ್ಜಹಾನ್ ಮುಂದೆ ತೋಡಿಕೊಂಡ ನೋವು. ತಮ್ಮ ಮಗಳು ಭಾನುವಾರ ಬೆಳಿಗ್ಗೆ ವಿಡಿಯೊ ಕಾಲ್ ಮಾಡಿ ಮಾತನಾಡಿದ್ದನ್ನು ಮಾಧ್ಯಮಗಳ ಜೊತೆ ಹಂಚಿಕೊಂಡ ನೂರ್ಜಹಾನ್ ಅವರು ಹಲವು ದಿನಗಳ ಹಿಂದೆ ಸಂಗ್ರಹಿಸಿಟ್ಟು ಕೊಂಡಿದ್ದ ನೀರು ವಾಸನೆ ಬರುತ್ತಿದೆ. ಕುಡಿಯಲು […]

ಆತಂಕದಲ್ಲೇ ದಿನದೂಡುವಂತಾಗಿದೆ : ಉಕ್ರೇನ್​​ನಲ್ಲಿರುವ ವಿದ್ಯಾರ್ಥಿನಿ ಅಳಲು

ಬೆಂಗಳೂರು,ಫೆ.27- ಭಯ, ಆತಂಕದ ನಡುವೆಯೇ ದಿನ ಕಳೆಯುವಂತಾಗಿದೆ ಎಂದು ಖಾಕ್ರ್ಯೀವ್ನಲ್ಲಿರುವ ಎಂಬಿಬಿಎಸ್ ವಿದ್ಯಾರ್ಥಿ ಅಂಕಿತ ಅಳಲು ತೋಡಿಕೊಂಡಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಅಪ್ಪ-ಅಮ್ಮನೊಂದಿಗೆ ಸಂಪರ್ಕದಲ್ಲಿದ್ದರೂ ದುಃಖದಲ್ಲಿಯೇ ಕಾಲ ನೂಕುವಂತಾಗಿದೆ. ತೀವ್ರ ಆತಂಕದಲ್ಲಿರುವ ಅಮ್ಮ ಮಾತನಾಡದೆ ಅಳುತ್ತಾರೆ. ಅಪ್ಪ ಧೈರ್ಯ ಹೇಳಿದರು. ನಾನು ಕೂಡ ಧೈರ್ಯವಾಗಿಯೇ ಇದ್ದೇನೆ. ವೈದ್ಯರಾಗಬೇಕೆಂಬ ಕನಸು ಹೊತ್ತು ಉಕ್ರೇನ್​​ನಲ್ಲಿ ವ್ಯಾಸಂಗ ಮಾಡಲು ಬಂದು ಯುದ್ದಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಪರಿಸ್ಥಿತಿ ತೀವ್ರ ಗಂಭೀರವಾಗಿದೆ. ಎಲ್ಲದಕ್ಕೂ ಸಮಸ್ಯೆಯಿದೆ. ತೀವ್ರ ಸಂಕಷ್ಟ ಪರಿಸ್ಥಿತಿಯಲ್ಲಿ […]