ಯುದ್ಧಪೀಡಿತ ಉಕ್ರೇನ್‍ನಿಂದ ರಾಜ್ಯಕ್ಕೆ ಮರಳಿದ 31 ವಿದ್ಯಾರ್ಥಿಗಳು

ಬೆಂಗಳೂರು,ಫೆ.28- ಉಕ್ರೇನ್‍ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ 31 ವಿದ್ಯಾರ್ಥಿಗಳು ರಾಜ್ಯಕ್ಕೆ ಮರಳಿದ್ದು, ಇಂದು ಸಂಜೆ ವೇಳೆಗೆ ಮತ್ತೆ ಆರು ಮಂದಿ ವಾಪಾಸಾಗಲಿದ್ದಾರೆ.ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರುವ ಪ್ರಯತ್ನ ಕೇಂದ್ರ ಸರ್ಕಾರದ ನೆರವಿನೊಂದಿಗೆ ನಿರಂತರವಾಗಿ ನಡೆಯುತ್ತಿದೆ. ನಿನ್ನೆ ಬೆಳಗ್ಗೆ ಮುಂಬೈ ಮೂಲಕ 12 ಮಂದಿ ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸಿದ್ದರು. 13 ಮಂದಿ ದೆಹಲಿ ಮೂಲಕ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅಲ್ಲದೆ, ಐದು ವಿದ್ಯಾರ್ಥಿಗಳು ದೆಹಲಿ ಮೂಲಕವೇ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಕೆಎಸ್‍ಡಿಎಂಎ ಆಯುಕ್ತ ಹಾಗೂ ನೋಡೆಲ್ ಅಧಿಕಾರಿ […]