ಗಣರಾಜ್ಯೋತ್ಸವದಲ್ಲಿ ಅನಾವರಣವಾಗಲಿವೆ ಕರ್ನಾಟಕದ ಅಮೋಘ ಕರಕುಶಲ ಕಲೆಗಳು

ಬೆಂಗಳೂರು, ಜ.22- ದೆಹಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರಕುಶಲ ಅಭಿವೃದ್ಧಿ ನಿಗಮ ಹಿರಿಯ ಕುಶಲಕರ್ಮಿಗಳ ಮಾರ್ಗದರ್ಶನದಲ್ಲಿ ನಿರ್ಮಿಸಿರುವ ಸ್ತಬ್ಧ ಚಿತ್ರಗಳಿಂದ ಕರ್ನಾಟಕದ ಕರಕುಶಲತೆ ದೇಶಕ್ಕೆ ಪರಿಚಯವಾಗಲಿವೆ. ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮದ ನೊಂದಾಯಿತ ಹಿರಿಯ ಕುಶಲಕರ್ಮಿ ಶಶಿಧರ ಅಡಪ ಅವರ ಮಾರ್ಗದರ್ಶನದಲ್ಲಿ ತಯಾರಿಸಿದ ಸ್ತಬ್ಧ ಚಿತ್ರಗಳ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಸಾಂಪ್ರದಾಯಿಕ ಕರಕುಶಲ ಕಲೆಗಳ ತೊಟ್ಟಿಲು ಕರ್ನಾಟಕ ಹೆಸರಿನ ಸ್ತಬ್ಧ ಚಿತ್ರದಲ್ಲಿ ಕಾವೇರಿ ಎಂಪೋರಿಯಂನ ಆನೆ, ಉಡುಪಿಯ […]