ಒಟ್ಟು 2.65 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು,ಮಾ.4- ಒಟ್ಟು 2.65 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಸಮಾಜ ಕಲ್ಯಾಣ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. 2022-23ನೇ ಸಾಲಿಗೆ 72ಸಾವಿರ ಕೋಟಿ ಸಾಲ, 72,089 ಕೋಟಿ ಬಂಡವಾಳ ಜಮೆಗಳು ಹಾಗೂ 1,89,888 ರಾಜಸ್ವ ಆದಾಯ ಸೇರಿ ಒಟ್ಟು 2,61,977 ಕೋಟಿ ಜಮೆಯನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ 2,04,587 ಕೋಟಿ ರಾಜಸ್ವ ವೆಚ್ಚವಾಗಿದ್ದು, 46,955 ಕೋಟಿ ರೂ.ಗಳು ಬಂಡವಾಳ ವೆಚ್ಚವಾಗಿವೆ. ಸಾಲ ಮರುಪಾವತಿಗೆ 14,179 ಕೋಟಿ ರೂ. […]