ಜಮ್ಮು-ಕಾಶ್ಮೀರ : ಕಂದಕಕ್ಕೆ ಕಾರು ಉರುಳಿಬಿದ್ದು 8 ಮಂದಿ ಸಾವು

ಜಮ್ಮು, ನ.17- ಕಾರೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಸೇರಿ ಎಂಟು ಮಂದಿ ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್ವಾ ರ್ ಪ್ರದೇಶದ ಬಳಿ ಸಂಭವಿಸಿದೆ.ನಿನ್ನೆ ಸಂಜೆ ಇಲ್ಲಿನ ಮಾರ್ವಾ ಮೂಲಕ ತೆರಳುತ್ತಿದ್ದ ಟಾಟಾ ಸುಮೋ ಕಾರೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಚುಂಜೋರ್, ನೌಪಾಚಿ, ಕದರ್ನಾ ಮಾರ್ವಾದ ನಿವಾಸಿಗಳು ಎಂದು ಹೇಳಲಾಗಿದ್ದು ಒಬ್ಬರ ಗುರುತು ಪತ್ತೆಯಾಗಿಲ್ಲ.ಅಪಘಾತದ ಸುದ್ದಿ ತಿಳಿದು ದಿಗ್ಭ್ರಮೆ […]