ನ್ಯೂಯಾರ್ಕ್ ಗವರ್ನರ್ ಆಗಿ ಕ್ಯಾಥಿ ಹೊಚುಲ್ ಅಧಿಕಾರ ಸ್ವೀಕಾರ

ಅಲ್ಬನಿ , ಜ. 2 – ಅಮೆರಿಕದ ಪ್ರತಿಷ್ಠಿತ ರಾಜ್ಯ ನ್ಯೂಯಾರ್ಕ್‍ನ ಗವರ್ನರ್ ಆಗಿ ಕ್ಯಾಥಿ ಹೊಚುಲ್ ಅಧಿಕಾರ ಸ್ವೀಕರಿಸಿದ್ದು ,ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಡೆಮೋಕ್ರಾಟ್ ಪಕ್ಷದ ನಾಯಕಿ ನ್ಯೂಯಾರ್ಕ್‍ನ 57 ನೇ ಗವರ್ನರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ರಾಜ್ಯದ ಪ್ರತಿಷ್ಠೆ ಹೆಚ್ಚಿಸುವುದು ಮುದಲ ಗುರಿಯಾಗಿದೆ ಎಂದು ಹೇಳಿದರು. ಬೆಲೆ ಏರಿಕೆ ತಗ್ಗಿಸಿ ಜೀವನ ಮಟ್ಟವನ್ನು ಹೆಚ್ಚಿಸಲು ಎಲ್ಲರು ಕೈಜೋಡಿಸಬೇಕು […]