ದಿವಂಗತ ಕೆ.ಸಿ.ರೆಡ್ಡಿಯವರ ಬದುಕು ಯುವ ನಾಯಕರಿಗೆ ಮಾರ್ಗದರ್ಶಕವಾಗಿವೆ : ಸಿಎಂ

ಬೆಂಗಳೂರು,ಫೆ.27- ಯುವ ನಾಯಕರಿಗೆ ಮಾಜಿ ಮುಖ್ಯಮಮತ್ರಿ ದಿವಂಗತ ಕೆ.ಸಿ.ರೆಡ್ಡಿಯವರ ಬದುಕು ಮಾರ್ಗದರ್ಶಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆರಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿ ಅವರು ದೂರದೃಷ್ಟಿಯಿರುವ ಹಿರಿಯ ನಾಯಕರು. ಅವರು ಹಾಕಿರುವ ಆಡಳಿತದ ಅಡಿಪಾಯದಿಂದ ಮೈಸೂರು ಸಂಸ್ಥಾನ ಹಾಗೂ ಕರ್ನಾಟಕ ರಾಜ್ಯವನ್ನು ಕಟ್ಟಲು ಸಾಧ್ಯವಾಯಿತು ಎಂದರು. ಉತ್ತಮ ಆಡಳಿತಗಾರರಾದ ಕೆ.ಸಿ.ರೆಡ್ಡಿಯವರ ಆದರ್ಶಗಳು, ತತ್ವಗಳು, ಸಾರ್ವಜನಿಕ ಬದುಕಿನ ರೀತಿ, […]