ವಿದ್ಯಾರ್ಥಿಗಳಿಗಾಗಿ ಆಡಿಯೋ ಪುಸ್ತಕ ಬಿಡುಗಡೆ ಮಾಡಿದ ಕೇರಳ

ತಿರುವನಂತಪುರಂ, ಫೆ.12- ಕೇರಳ ಶಿಕ್ಷಣ ಇಲಾಖೆಯು 10 ಮತ್ತು 12ನೇ ತರಗತಿಗಳಿಗೆ ಶನಿವಾರ ಆಡಿಯೋ ಪುಸ್ತಕಗಳನ್ನು ಬಿಡುಗಡೆ ಮಾಡಿದೆ. ಕೈಟ್ ವಿಕ್ಟರ್ಸ್ ಚಾನೆಲ್ ಮೂಲಕ ಪ್ರಸಾರವಾಗುತ್ತಿರುವ ಫಸ್ಟ್ ಬೆಲ್ ಡಿಜಿಟಲ್ ತರಗತಿಗಳ ಮುಂದುವರಿಕೆಯಾಗಿ ಆಡಿಯೋ ಪುಸ್ತಕಗಳು ಅನಾವರಣಗೊಂಡಿವೆ. ಸಾರ್ವಜನಿಕ ಪರೀಕ್ಷೆಗಳಿಗೆ ಕೆಲವೇ ವಾರಗಳು ಬಾಕಿಯಿದ್ದು ಈ ಹಂತದಲ್ಲಿ ಧ್ವನಿ ಆಧಾರಿತ ಪುಸ್ತಕಗಳು ಮಕ್ಕಳಿಗೆ ಅನುಕೂಲವಾಗಲಿವೆ ಎಂದು ಆಡಿಯೋ ಪುಸಕ್ತಗಳನ್ನು ಬಿಡುಗಡೆ ಮಾಡಿದ ಶಿಕ್ಷಣ ಸಚಿವ ವಿಶಿವನ್‍ಕುಟ್ಟಿ ಹೇಳಿದ್ದಾರೆ. ಪ್ರತಿ ವಿಷಯವನ್ನು ಸರಾಸರಿ 1.5 ಗಂಟೆಗಳ ಅವಧಿಯಲ್ಲಿ ವಿವರಿಸಲಾಗಿದೆ. […]