ಚಿರತೆ ಜೊತೆ ಹೋರಾಡಿ ಕೊಂದು ಜೀವ ಉಳಿಸಿಕೊಂಡ ಭೂಪ..!

ತಿರುವನಂತಪುರ,ಸೆ.4- ತನ್ನ ಮೇಲೆರಗಿದ ಚಿರತೆ ವಿರುದ್ಧ ಕಾದಾಡಿ ಅದನ್ನು ಕೊಂದು ವ್ಯಕ್ತಿಯೊಬ್ಬ ಜೀವ ಉಳಿಸಿಕೊಂಡಿರುವ ಘಟನೆ ಇಡುಕಿ ಜಿಲ್ಲೆಯ ಮಾಂಕುಳಂ ಗ್ರಾಮದ ಬಳಿ ನಡೆದಿದೆ. ಸುಮಾರು 12 ವರ್ಷದ ಹೆಣ್ಣು ಚಿರತೆಯೊಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ್ (47) ಎಂಬುವವರ ಮೇಲೆ ಏಕಾಏಕಿ ಎರಗಿ ಆತನ ಕೈ ಕಚ್ಚಿದೆ. ಆದರೂ ಗೋಪಾಲ್ ಭಯಪಡದೆ ಒಂದು ಕೈಯಲ್ಲಿ ಚಿರತೆ ಕತ್ತನ್ನು ಬಲವಾಗಿ ಹಿಡಿದು ನೆಲ್ಲಕ್ಕುರುಳಿಸಿ ನಂತರ ಕಾಲಿನಿಂದ ಚೂರಿಯನ್ನು ಎಳೆದುಕೊಂಡು ಅದಕ್ಕೆ ಇರಿದು ಕೊಂದು ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. […]