ಹಾಲಿನ ದರ ಹೆಚ್ಚಿಸುವಂತೆ ಒಕ್ಕೂಟಗಳ ಮನವಿ

ಬೆಂಗಳೂರು, ಜ.18- ಪ್ರತಿ ಲೀಟರ್ ಹಾಲಿನ ದರವನ್ನು 3ರೂ. ಹೆಚ್ಚಳ ಮಾಡುವಂತೆ ಹಾಲು ಒಕ್ಕೂಟಗಳು ಕೆಎಂಎಫ್‍ಗೆ ಮನವಿ ಮಾಡಿವೆ. ಹಾಲು ಒಕ್ಕೂಟಗಳು ಮಾಡಿರುವ ಹಾಲಿನ ದರದ ಹೆಚ್ಚಳದ ಬೇಡಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷರಾದ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಪ್ರಸ್ತುತ 37ರೂ. ಪ್ರತಿ ಲೀಟರ್ ಹಾಲಿನ ದರವನ್ನು ಅದನ್ನು 40ರೂ.ಗೆ ಹೆಚ್ಚಳ ಮಾಡುವಂತೆ ಹಾಲು ಒಕ್ಕೂಟವನ್ನು ಮನವಿ ಮಾಡಿವೆ. ಈ ಪ್ರಸ್ತಾವವನ್ನು ಸಿಎಂ ಬಳಿ ಚರ್ಚಿಸಿ ಅನುಮತಿ ನೀಡಿದರೆ ದರ […]