ಕೋಲಾರದಲ್ಲಿರುವ ಬೆಮೆಲ್ ಕಾರ್ಖಾನೆ ಖಾಸಗೀಕರಣವಿಲ್ಲ : ನಿರಾಣಿ

ಬೆಂಗಳೂರು,ಮಾ.8- ಕೋಲಾರದಲ್ಲಿರುವ ಬಿಇಎಂಎಲ್ (ಬೆಮೆಲ್)ಕಾರ್ಖಾನೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವುದಿಲ್ಲ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.  ವಿಧಾನಪರಿಷತ್‍ನಲ್ಲಿ ಜೆಡಿಎಸ್‍ನ ಸದಸ್ಯ ಗೋವಿಂದರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು. ಬಿಇಎಂಎಲ್‍ನಲ್ಲಿ 1149 ಎಕರೆ ಭೂಮಿ ಇದೆ. ಈ ಮೊದಲು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ 979 ಎಕರೆಯನ್ನು ಬೆಮೆಲ್‍ಗೆ ನೀಡಿದ್ದು, ಅದು ಬಳಕೆಯಾಗಿ ತಟಸ್ಥವಾಗಿರುವುದರಿಂದ ಹಿಂಪಡೆದು ಅಲ್ಲಿ ಖಾಸಗಿ ಕೈಗಾರಿಕೆಗಳ ಸ್ಥಾಪೆನೆಗೆ ಅವಕಾಶ ಮಾಡಿಕೊಡಲಾಗುವುದು. ಕೈಗಾರಿಕಾ ನಿವೇಶನಗಳ ಹಂಚಿಕೆಯಲ್ಲಿ ಎಸ್ಸಿ-ಎಸ್ಟಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ […]