ಮುಸ್ಲಿಂ ಗೂಂಡಾಗಳೇ ಹತ್ಯೆ ಮಾಡಿರುವುದು ಸಾಬೀತಾಗಿದೆ : ಸಚಿವ ಈಶ್ವರಪ್ಪ

ಬೆಂಗಳೂರು,ಫೆ.22- ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನನ್ನು ಮುಸ್ಲಿಮರೇ ಹೊಡೆದಿರುವುದು ಸಾಭೀತಾಗಿದೆ. ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಈಗಲಾದರೂ ನನ್ನ ಮಾತನ್ನು ಒಪ್ಪಿಕೊಳ್ಳಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಮತ್ತೊಂದು ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷನನ್ನು ಕೊಲೆ ಮಾಡಿರುವವರು ಮುಸ್ಲಿಂ ಗೂಂಡಾಗಳೇ ಎಂದು ನಾನು ಹೇಳಿದ್ದೆ. ನಾನು ನಿನ್ನೆ ಎಸ್‍ಪಿ ಬಳಿ ಮಾಹಿತಿ ಪಡೆದು ಹೇಳಿಕೆ ಕೊಟ್ಟಿದ್ದೆ. ಅರೆಸ್ಟ್ ಆಗಿರೋರು ಎಲ್ಲರೂ ಮುಸ್ಲಿಮರೇ ಆಗಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈಗಾಗಲೇ ಹಲವರ ಬಂಧನ […]