ಕನ್ನಡ ಸಾಹಿತ್ಯ ಲೋಕದ ಅಪ್ಪಟ ಕವಿಕೋಗಿಲೆ ರಸಋಷಿ ಕುವೆಂಪು

ಕನ್ನಡ ಎನೆ ಕುಣಿದಾಡುವುದೆನ್ನೆದೆಕನ್ನಡ ಎನೆ ಕಿವಿನಿಮಿರುವುದುಕನ್ನಡ..ಕನ್ನಡ..ಆ..ಸವಿ ಕನ್ನಡ..ಕನ್ನಡಿಗರನ್ನು ಸಾಹಿತ್ಯದಲೆಗಳ ಮೇಲೆ ತೇಲುವಂತೆ ಮಾಡಿದ ಶಬ್ಧಮಾಂತ್ರಿಕ, ಕರುನಾಡಿಗೆ ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂಬ ನಾಡಗೀತೆಯ ಪದಪುಂಜಗಳಿಂದ ಕನ್ನಡ ಮಾತೆಗೆ ಶಬ್ಧಾರ್ಚನೆ ಮಾಡಿದ ಸಹ್ಯಾದ್ರಿ ಸಾಲ ಕವಿಕುಲೋತ್ತಮ ಕುವೆಂಪು, ಕನ್ನಡ ಸಾಹಿತ್ಯ ಲೋಕದ ಅಪ್ಪಟ ಕವಿಕೋಗಿಲೆ. ಕುವೆಂಪುರವರು ಕನ್ನಡ ನಾಡಿನ ಹೆಮ್ಮೆಯ ರಸಕವಿ, ಋಷಿಕವಿ, ರಾಷ್ಟ್ರಕವಿ ಕನ್ನಡದ ಮತ್ತೋರ್ವ ವರಕವಿಗಳಾದ ಬೇಂದ್ರೆಯವರಿಂದಲೇಯುಗದ ಕವಿ,ಜಗದಕವಿ ಎಂದು ಕೀರ್ತಿತರಾಗಿದ್ದಂತಹವರು. ಕನ್ನಡದ ಹಿರಿಮೆಯನ್ನುರಾಷ್ಟ್ರೀಯ ಮತ್ತುಅಂತರರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ […]