4 ಐತಿಹಾಸಿಕ ಕೆರೆ ನುಂಗಿರುವವರ ವಿರುದ್ಧ ಕ್ರಮಕ್ಕೆ NR ರಮೇಶ್ ಆಗ್ರಹ

ಬೆಂಗಳೂರು,ನ.14- ನಗರದ ಪ್ರಮುಖ ನಾಲ್ಕು ಕೆರೆಗಳನ್ನು ಒತ್ತುವರಿ ಮಾಡಿರುವವರು ಹಾಗೂ ಅವರ ಈ ಕಾರ್ಯಕ್ಕೆ ಕುಮಕ್ಕು ನೀಡಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಒತ್ತಾಯಿಸಿದ್ದಾರೆ. ಬೆಂಗಳೂರು ನಗರ ಮತ್ತು ನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ ಹತ್ತಾರು ಐತಿಹಾಸಿಕ ಕೆರೆಗಳಿಗೆ ಎ.ಟಿ.ರಾಮಸ್ವಾಮಿ ಹಾಗೂ ಕೋಳಿವಾಡ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಿದೆ. […]
ರಾಜ್ಯದಲ್ಲಿ ಅತಿವೃಷ್ಟಿಯಾದರೂ ಇನ್ನೂ ತುಂಬಿಲ್ಲ ನೂರಾರು ಕೆರೆಗಳು
ಬೆಂಗಳೂರು,ಆ.21- ಭಾರೀ ಮಳೆಯಿಂದ ಅತಿವೃಷ್ಟಿ, ಪ್ರವಾಹ ಉಂಟಾಗಿ ಜನಜೀವನ ತತ್ತರಿಸಿದರೂ ರಾಜ್ಯದ 225 ಕೆರೆಗಳಿಗೆ ನೀರೇ ಬಂದಿಲ್ಲ. ರಾಜ್ಯದ 3,669 ಸಣ್ಣ ಕೆರೆಗಳ ಪೈಕಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುವುದು 1315 ಕೆರೆಗಳು ಮಾತ್ರ. ಜುಲೈ ಮತ್ತು ಆಗಸ್ಟ್‍ನಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗಿ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವಂತಾಗಿತ್ತು. ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಫಾ, ವರಾಹಿ, ಜಲಾಶಯಗಳನ್ನು ಹೊರತುಪಡಿಸಿ ಉಳಿದ ಪ್ರಮುಖ ಜಲಾಶಯಗಳು ಗರಿಷ್ಠ ಪ್ರಮಾಣದಲ್ಲ ಭರ್ತಿಯಾಗಿವೆ. ಕೃಷ್ಣ, ಭದ್ರ, ತುಂಗಾಭದ್ರ, ಕಪಿಲಾ ಕಾವೇರಿ, ಹೇಮಾವತಿ ಸೇರಿದಂತೆ […]