ಕನ್ನಡದ ಹೆಸರಾಂತ ನಟ ಲಕ್ಷ್ಮಣ್ ಇನ್ನಿಲ್ಲ

ಬೆಂಗಳೂರು.ಜ.23-ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ಗಮನ ಸೆಳೆದಿದ್ದ ಹಿರಿಯ ನಟ ಲಕ್ಷ್ಮಣ್(74) ಹೃದಯಾಘಾತದಿಂದ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಯಜಮಾನ ಸೂರ್ಯವಂಶ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟ್ಟಿಸಿದ್ದ ಅವರು ಹಾಸ್ಯ-ನೆಗೆಟೀವ್ ರೋಲ್‍ನಲ್ಲೂ ಮಿಂಚಿದ್ದರು . ಕಳೆದ ರಾತ್ರಿ ಲಕ್ಷ್ಮಣ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ನಂತರ ಅವರನ್ನು ಮುಂಜಾನೆ 3.30 ಸುಮಾರಿಗೆ ಮನೆಯವರು ನಾಗರಬಾವಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಇಸಿಜಿ ಮಾಡಿದ ನಂತರ ಚೇತರಿಸಿಕೊಂಡಿದ್ದರು. ಬಳಿಕ ಮನೆಗೆ ಕರೆದುಕೊಂಡು ಬರಲಾಯಿತು ಎಂದು ಮೂಲಗಳು ತಿಳಿಸಿವೆ. […]