ತಿಂಗಳುಗಟ್ಟಲೆ ತಾಯಿಯ ಶವ ಬಚ್ಚಿಟ್ಟಿದ್ದ ಮಗಳು

ಮುಂಬೈ,ಮಾ.15- ಮಗಳು ತನ್ನ ತಾಯಿಯ ಶವವನ್ನು ತಿಂಗಳುಗಟ್ಟಲೆ ಪ್ಲಾಸ್ಟಿಕ್ ಚೀಲದಲ್ಲಿ ಬಚ್ಚಿಟ್ಟಿದ್ದ ಆಘಾತಕಾರಿ ಘಟನೆ ಮುಂಬೈನ ಲಾಲ್‍ಭಾಗ್ ಪ್ರದೇಶದಲ್ಲಿ ನಡೆದಿದೆ. 53 ವರ್ಷದ ಮಹಿಳೆಯ ಶವ ಪ್ಲಾಸ್ಟಿಕ್ ಚೀಲದೊಳಗೆ ಪತ್ತೆಯಾಗಿದ್ದು, ಶವವನ್ನು ತಿಂಗಳುಗಟ್ಟಲೆ ಬಚ್ಚಲಲ್ಲಿ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯ ಮಗಳು 21 ವರ್ಷದವಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮೃತ ಮಹಿಳೆಯ ಸಹೋದರ ಮತ್ತು ಸೋದರಳಿಯ ನಿನ್ನೆ ಕಲಾಚೌಕಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು ಎಂದು ಡಿಸಿಪಿ ಪ್ರವೀಣ್ ಮುಂದೆ ತಿಳಿಸಿದ್ದಾರೆ. ಮಹಿಳೆ ವಾಸಿಸುತ್ತಿದ್ದ […]