ಬಹುಕೋಟಿ ಮೇವು ಹಗರಣದಲ್ಲಿ ಲಾಲೂ ದೋಷಿ, ಫೆ.18ರಂದು ಶಿಕ್ಷೆ ಪ್ರಕಟ
ನವದೆಹಲಿ, ಫೆ.15- ವಿಶೇಷ ಸಿಬಿಐ ನ್ಯಾಯಾಲಯವು ಇಂದು ಆರ್‍ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರನ್ನು 139.35 ಕೋಟಿ ರೂ.ಗಳ ದೊರಾಂಡಾ ಖಜಾನೆ ದುರ್ಬಳಕೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ 18ರಂದು ಪ್ರಕಟಿಸಲಾಗುವುದು ಎಂದು ಸಿಬಿಐ ವಕೀಲರೊಬ್ಬರು ತಿಳಿಸಿದ್ದಾರೆ. ಕಳೆದ ತಿಂಗಳು ವಿಶೇಷ ಸಿಬಿಐ (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ನ್ಯಾಯಾಲಯದ ನ್ಯಾಯಾೀಧಿಶ ಎಸ್.ಕೆ. ಶಶಿ ಅವರು ಯಾದವ್ ಸೇರಿದಂತೆ 99 ಆರೋಪಿಗಳ ವಿರುದ್ಧದ ವಿಚಾರಣೆಯನ್ನು ಪೂರ್ಣಗೊಳಿಸಿದ್ದರು. ವಿಚಾರಣೆ ಕಳೆದ ವರ್ಷದ […]