ಸಮಾಜ ಕಲ್ಯಾಣ ಇಲಾಖೆ ಹೆಸರಲ್ಲಿ ವಂಚನೆ ವಂಚಿಸುತ್ತಿದ್ದ ಮೂವರ ಬಂಧನ

ಬೆಂಗಳೂರು, ಜ.25- ಬಿಬಿಎಂಪಿ ಸಮಾಜ ಕಲ್ಯಾಣ ಇಲಾಖೆ ಹೆಸರೇಳಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಜಾಲವೊಂದನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ. ವಿದ್ಯಾರಣ್ಯಪುರದ ಹರ್ಷ(20), ವಿಜಯನಗರದ ರೂಪೇಶ್(18) ಮತ್ತು ಬಾಪೂಜಿ ನಗರದ ಮೋಹನ್ ಅಲಿಯಾಸ್ ಬೋರ(21) ಬಂಧಿತ ವಂಚಕರು. ಬಿಬಿಎಂಪಿಯ ಸಮಾಜ ಕಲ್ಯಾಣ ಇಲಾಖೆಯ ಹೆಸರನ್ನು ಬಳಸಿಕೊಂಡು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್‍ಗಳನ್ನು ಕೊಡುತ್ತೇವೆಂದು ಸಾರ್ವಜನಿಕರಿಗೆ ಕರೆ ಮಾಡಿ ನಂಬಿಸಿ, ಹಣ ಹಾಕಿಸಿಕೊಂಡು ಅಮಾಯಕ ಜನರನ್ನು ಈ ಮೂವರು ವಂಚಿಸುತ್ತಿದ್ದರು. ವಿದ್ಯಾರಣ್ಯಪುರದ ವ್ಯಕ್ತಿಯೊಬ್ಬರಿಗೆ […]
ಮೋಜು- ಮಸ್ತಿಗಾಗಿ ಕಳ್ಳತನಕ್ಕಿಳಿದಿದ್ದ ಇಬ್ಬರು ಅಂದರ್

ಬೆಂಗಳೂರು, ನ.26- ಮೋಜು-ಮಸ್ತಿಗಾಗಿ ದ್ವಿಚಕ್ರ ವಾಹನಗಳು, ಮೊಬೈಲ್, ಲ್ಯಾಪ್‍ಟಾಪ್ ಹಾಗೂ ಮನೆಗಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಇಬ್ಬರನ್ನು ವಿದ್ಯಾರಣ್ಯ ಪುರ ಠಾಣೆ ಪೊಲೀಸರು ಬಂಧಿಸಿ 6.87 ಲಕ್ಷ ರೂ. ಬೆಲೆಬಾಳುವ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ನಿವಾಸಿಗಳಾದ ರಂಜಿತ್ ಅಲಿಯಾಸ್ ಸಂತು ಅಲಿಯಾಸ್ ಕರಿಯಾ ಅಲಿಯಾಸ್ ಪುಟ್ಟ(27) ಮತ್ತು ಅಜಿತ್(25) ಬಂಧಿತರು. ವಿದ್ಯಾರಣ್ಯ ಪುರದ ದೇಶಬಂಧು ನಗರ ನಿವಾಸಿ ಅಬ್ದುಲ್ ಖಾದರ್ ಎಂಬುವವರ ಮನೆಯಲ್ಲಿ 20 ಸಾವಿರ ಬೆಲೆಯ ವಿವೋ ಕಂಪೆನಿಯ ಮೊಬೈಲ್ 70 ಸಾವಿರ ಬೆಲೆಯ ಲ್ಯಾಪ್‍ಟಾಪ್ ಕಳ್ಳತನವಾಗಿರುವ […]