ಟ್ರಾಫಿಕ್ ದಂಡ ಪಾವತಿಗೆ ಇಂದೇ ಕೊನೆ , 100 ಕೋಟಿ ಸಂಗ್ರಹ ನಿರೀಕ್ಷೆ

ಬೆಂಗಳೂರು,ಫೆ.11- ವಾಹನ ಸವಾರರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ನಿನ್ನೆ ಸಂಜೆಯವರೆಗೂ 85 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಕೊನೆ ದಿನವಾದ ಇಂದು ಒಟ್ಟು 100 ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆ ಇದೆ. ಹೈಕೋರ್ಟ್‍ನ ಲೋಕಾ ಅದಾಲತ್‍ನಲ್ಲಿ ಸೂಚಿಸಿದ ಪ್ರಕಾರ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಶೇ.50 ರಿಯಾಯಿತಿಯೊಂದಿಗೆ ದಂಡ ಸಂಗ್ರಹಿಸಲು ಫೆ.3ರಿಂದ ಆರಂಭಿಸಲಾಯಿತು. ಆರಂಭದಿಂದಲೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ ಏಳು ಕೋಟಿ ರೂಪಾಯಿ ಸಂಗ್ರಹವಾಗಿ, 22 ಸಾವಿರಕ್ಕೂ ಹೆಚ್ಚು […]