ಹಲವು ದಿಗ್ಗಜರಿಗೆ ಇದೇ ಕೊನೆ ಚುನಾವಣೆ..!?

ಬೆಂಗಳೂರು,ಫೆ.20- ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ರಾಜಕಾರಣದ ಹಲವು ದಿಗ್ಗಜರಿಗೆ ಮುಂಬರುವ ವಿಧಾನಸಭಾ ಚುನಾವಣೆಯು ಕೊನೆಯ ಚುನಾವಣೆಯಾಗುವ ಸಾಧ್ಯತೆಯಿದೆ. ಏಕೆಂದರೆ ಅವರು ಇನ್ನೇನು ಐದು ವರ್ಷಗಳ ನಂತರ 80 ವರ್ಷ ಪೂರೈಸುವ ಹೊಸ್ತಿಲಲ್ಲಿದ್ದಾರೆ. ಈ ಹಿರಿಯರಲ್ಲಿ ಹೆಚ್ಚಿನವರು ಆ ವೇಳೆಗೆ ಚುನಾವಣಾ ರಾಜಕೀಯದಿಂದ ನಿವೃತ್ತರಾಗಬಹುದು. ಕಾಂಗ್ರೆಸ್ ಶಾಸಕರಾದ ಆರ್.ವಿ.ದೇಶಪಾಂಡೆ (75), ಕೆ.ಆರ್.ರಮೇಶ್ ಕುಮಾರ್ (73) ಶಾಮನೂರು ಶಿವಶಂಕರಪ್ಪ (91) ಸೇರಿದಂತೆ ಇತರರಿಗೆ ಇದು ಕೊನೆ ಚುನಾವಣೆ ಆಗಬಹುದು. ಬಿಜೆಪಿ ಶಾಸಕರಾದ ಕೆ.ಎಸ್.ಈಶ್ವರಪ್ಪ (74), ಜಿ.ಎಚ್.ತಿಪ್ಪಾರೆಡ್ಡಿ […]
ವಿಚಾರಣೆಗೆ ಕಾಲವಕಾಶ ಕೋರಿದ ಮನೀಷ್ ಸಿಸೋಡಿಯಾ

ನವದೆಹಲಿ,ಫೆ.19 – ನಗರಾಡಳಿತದ ಬಜೆಟ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ, ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಲು ಕಾಲವಕಾಶ ನೀಡುವಂತೆ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸಿಬಿಐಗೆ ಮನವಿ ಮಾಡಿದ್ದಾರೆ. ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮ ನಡೆಸಿರುವ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ 3 ತಿಂಗಳ ಹಿಂದೆ ಚಾರ್ಜ್‍ಶೀಟ್ ಸಲ್ಲಿಸಿತ್ತು. ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ಆದರೆ ಎರಡು ವಾರಗಳ ಬಳಿಕ ಹಾಜರಾಗಲು ಅವಕಾಶ ನೀಡುವಂತೆ ಸಿಸೋಡಿಯಾ ಸಿಬಿಐಗೆ ಮನವಿ ಮಾಡಿದ್ದಾರೆ. ಕೋಟಿ […]
ಬಿಎಸ್‍ವೈಗೆ ಇದು ಕೊನೆ ಅಧಿವೇಶನ

ಬೆಂಗಳೂರು,ಫೆ.11- ನಾಲ್ಕು ದಶಕದ ಚುನಾವಣಾ ರಾಜಕೀಯದಲ್ಲಿ ಹೋರಾಟದ ಮೂಲಕವೇ ಮನೆ ಮಾತಾಗಿರುವ ಬಿಎಸ್‍ವೈ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ಪ್ರಸಕ್ತ ಅಧಿವೇಶನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೊನೆಯ ಅಧಿವೇಶನವಾಗಲಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದಿದ್ದ ಯಡಿಯರೂಪ್ಪ, ಸದನದಲ್ಲಿ ಗೌರವಪೂರ್ವಕ ವಿದಾಯವನ್ನು ಎದುರು ನೋಡುತ್ತಿದ್ದಾರೆ. ರಾಜ್ಯ ರಾಜಕೀಯ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗಿದು ಕಡೆಯ ಅಧಿವೇಶನ. 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು […]