ಲತಾ ಮಂಗೇಶ್ಕರ್ ಸೇರಿದಂತೆ ಅಗಲಿದ ಗಣ್ಯರಿಗೆ ವಿಧಾನ ಪರಿಷತ್‍ನಲ್ಲಿ ಸಂತಾಪ

ಬೆಂಗಳೂರು, ಫೆ.14- ಭಾರತ ರತ್ನ ಲತಾ ಮಂಗೇಶ್ಕರ್ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಪರಿಷತ್‍ನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವರ್ಷ ಮೊದಲ ಕಲಾಪವಾದ ಇಂದು ವಂದೇ ಮಾತರಂ ಗಾಯನದ ಮೂಲಕ ಅಧಿವೇಶನಕ್ಕೆ ಚಾಲನೆ ನೀಡಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರ ಸೂಚನೆಯ ಮೇರೆಗೆ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರು ವಿಧಾನಮಂಡಲದ ಜಂಟಿ ಅವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣವನ್ನು ಮಂಡಿಸಿದರು. ನಂತರ ವಿವಿಧ ನೇಮಕಾತಿಗಳನ್ನು ಸಭಾಪತಿ ಸದನದ ಗಮನಕ್ಕೆ ತಂದರು. ಬಳಿಕ ಸಂತಪ ಸೂಚನಾ ನಿರ್ಣಯವನ್ನು ಕೈಗೆತ್ತಿಕೊಂಡ […]