ಮಾ.23 ರಂದು ‘ವಿವೇಕಾನಂದ ಯುವಶಕ್ತಿ ಸಂಘ’ ಯೋಜನೆಗೆ ಚಾಲನೆ

ಬೆಂಗಳೂರು, ಮಾ.19- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಗೆ ಮಾ.23 ರಂದು ಚಾಲನೆ ನೀಡಲಿದ್ದಾರೆ. ಈ ಕುರಿತು ಇಂದು ಮುಖ್ಯಮಂತ್ರಿಯವರು ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಘಗಳ ರಚನೆಯ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಬಹಳ ವರ್ಷಗಳಿಂದ ಸಕ್ರಿಯವಾಗಿವೆ. ಆದರೆ ಯುವಕರಿಗಾಗಿ ಮೊದಲ ಬಾರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಇಂತಹ ಯೋಜನೆಯನ್ನು ರೂಪಿಸಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು […]

ನಾಳೆ ಬಿಜೆಪಿ ವಿಜಯಸಂಕಲ್ಪ ರಥಯಾತ್ರೆಗೆ ಚಾಲನೆ

ಬೆಂಗಳೂರು,ಫೆ.28- ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ಕೊಟ್ಟು ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ ಬೆನ್ನಲ್ಲೆ ಬಿಜೆಪಿಯ ವಿಜಯಸಂಕಲ್ಪ ಯಾತ್ರೆ ನಾಳೆಯಿಂದ ಆರಂಭವಾಗಲಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಬಿಜೆಪಿ ರಾಜ್ಯದ ನಾಲ್ಕು ದಿಕ್ಕಿನಿಂದ ರಥಯಾತ್ರೆಗೆ ಸಜ್ಜಾಗಿದೆ. ಅದಕ್ಕಾಗಿ ರಥಗಳು ಸನ್ನದ್ಧಗೊಂಡಿವೆ. ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಚಾರದ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾರ್ಚ್ 2ರಂದು ಬೆಳಗಾವಿ ಜಿಲ್ಲೆಯ […]

ಅಂಬಾರಿ ಉತ್ಸವ ಸ್ಲೀಪರ್ ಬಸ್‍ಗಳಿಗೆ ಚಾಲನೆ

ಬೆಂಗಳೂರು,ಫೆ.21-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಂಬಾರಿ ಉತ್ಸವ ಸ್ಲೀಪರ್ ಬಸ್‍ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಅಂಬಾರಿ ಉತ್ಸವದ ಬಸ್‍ಗಳಿಗೆ ಮುಖ್ಯಮಂತ್ರಿ ಹಸಿರುನಿಶಾನೆ ತೋರಿದರು. ಕೆಎಸ್‍ಆರ್‍ಟಿಸಿಯು 50 ಓಲ್ವೊ ಸ್ಲೀಪರ್ ವಾಹನಗಳನ್ನು ಅಂಬಾರಿ ಉತ್ಸವದ ಬಸ್‍ಗಳನ್ನಾಗಿ ಕಾರ್ಯಾಚರಣೆ ನಡೆಸಲಿದ್ದು, ಮೊದಲ ಹಂತವಾಗಿ ಇಂದು 15 ಅಂಬಾರಿ ಉತ್ಸವದ ಬಸ್‍ಗಳಿಗೆ ಚಾಲನೆ ನೀಡಲಾಯಿತು. ಅಂಬಾರಿ ಉತ್ಸವ ಎಂಬ ಬ್ರಾಂಡ್ ಹೆಸರು ಹೊಂದಿರುವ ಹಾಗೂ ಸಂಭ್ರಮದ ಪ್ರಯಾಣ ಎಂಬ ಟ್ಯಾಗ್‍ಲೈನ್ ಹೊಂದಿರುವ […]

‘ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ’ ಘೋಷಿಸಿ ರಾಜಕೀಯಕ್ಕೆ ರೆಡ್ಡಿ ರೀಎಂಟ್ರಿ

ಬೆಂಗಳೂರು,ಡಿ.25- ಬಿಜೆಪಿಯೊಂದಿಗಿನ ಋಣ ಇಂದಿಗೆ ಮುಗಿಯಿತು. ಜನ ಸಾಮಾನ್ಯರ ಒತ್ತಡದಂತೆ ಮತ್ತೆ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಲು ನಾನು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸ್ಥಾಪಿಸುತ್ತಿದ್ದೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ. ಪಾರಿಜಾತದಲ್ಲಿ ಸುದ್ದಿಗೋಷ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಣ್ಣ ಬಸವಣ್ಣ ಅವರ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಿದ್ಧಾಂತ ಆಧರಿಸಿ ಯಾವುದೇ ಜಾತಿ, ಮತ, ಲಿಂಗ ತಾರತಮ್ಯ ಇಲ್ಲದಂತೆ ಅಭಿವೃದ್ಧಿ ಕೆಲಸ ಮಾಡಲು ಹೊಸ ಪಕ್ಷ ಸ್ಥಾಪಿಸಲಾಗುತ್ತಿದೆ. ಇನ್ನೂ ಮುಂದೆ […]

RH-200 ಸೌಂಡಿಂಗ್ ರಾಕೆಟ್‍ನ ಸತತ 200ನೇ ಯಶಸ್ವಿ ಉಡಾವಣೆ

ಬೆಂಗಳೂರು, ನ.24 -ಇಸ್ರೋದ ಬಹುಮುಖ ಸೌಂಡಿಂಗ್ ರಾಕೆಟ್ RH-200 ತಿರುವನಂತಪುರಂನ ತುಂಬಾ ತೀರದಿಂದ ಸತತ 200 ನೇ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದನ್ನು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದೆ. ಇದಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಇತರೆ ಅಧಿಕಾರಿಗ ಸಾಕ್ಷಿಯಾದರು. ಭಾರತೀಯ ಸೌಂಡಿಂಗ್ ರಾಕೆಟ್‍ಗಳನ್ನು ಪವನಶಾಸ್ತ್ರ, ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಗಳನ್ನು ನಡೆಸಲು ಮತ್ತು ವೈಜ್ಞಾನಿಕ ಸಮುದಾಯಕ್ಕೆ ವಿಶೇಷ ಸಾಧನಗಳಾಗಿ ಬಳಸಲಾಗುತ್ತದೆ […]

BIG NEWS : 5G ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ,ಅ.1-ದೇಶದ ಹದಿಮೂರು ನಗರಗಳಲ್ಲಿ ಇಂದಿನಿಂದ ಲಭ್ಯವಾಗುವ 5ಜಿ ಸೇವೆಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದರು. ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ 6ನೇ ಭಾರತೀಯ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ 5ಜಿಗೆ ಚಾಲನೆ ನೀಡಲಾಗಿದೆ.ಈ ಸೇವೆ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ 13 ನಗರಗಳಲ್ಲಿ ಇಂದಿನಿಂದ ಲಭ್ಯವಾಗಲಿದೆ. 4ಜಿಗಿಂತಲೂ 10 ಪಟ್ಟು ವೇಗ ಹೊಂದಿರುವ 5ಜಿ ಸೇವೆ ಹೊಸ ತಂತ್ರಜ್ಞಾನ ಉದಯಕ್ಕೆ ಕಾರಣವಾಗಿದೆ. ತಡೆರಹಿತ ನೆಟ್‍ವರ್ಕ್, ವೇಗವಾದ ದತ್ತಾಂಶ ವರ್ಗಾವಣೆ, ಕಡಿಮೆ ವಲಯದಲ್ಲಿ ಹೆಚ್ಚು ವಿಶ್ವಾಸಾರ್ಹ ಸಂವಹನಗಳು,ಇಂಧನ ದಕ್ಷತೆ, ಸ್ಪೆಕ್ಟ್ರಂ […]

ಜಮ್ಮು-ಕಾಶ್ಮೀರದಲ್ಲಿ ಗುಲಾಂನಬಿ ಅಜಾದ್ ರ‍್ಯಾಲಿ

ಜಮ್ಮು,ಸೆ.4- ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಗುಲಾಂನಬಿ ಅಜಾದ್ ಇಂದು ತವರು ನೆಲ ಜಮ್ಮುಕಾಶ್ಮೀರದಲ್ಲಿ ಪ್ರಥಮ ರ‍್ಯಾಲಿ ನಡೆಸುತ್ತಿದ್ದಾರೆ. ಇದೇ ದಿನ ತವರು ನೆಲದಲ್ಲಿ ಹೊಸ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ. ಜಮ್ಮುಕಾಶ್ಮೀರದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಇಂದು ಬೆಳಗ್ಗೆ ದೆಹಲಿಯಿಂದ ಪ್ರಯಾಣ ಆರಂಭಿಸಿದರು. ಹಲವು ಕಾರ್ಯಕ್ರಮಗಳು, ಸಾರ್ವಜನಿಕ ಸಭೆಗಳು ನಿಗದಿಯಾಗಿದ್ದು, ಅದರಲ್ಲಿ ಗುಲಾಂನಬಿ ಅಜಾದ್ ಭಾಗವಹಿಸಲಿದ್ದಾರೆ.ಕಾಂಗ್ರೆಸ್ ಜೊತೆಗಿನ 5 ದಶಕಗಳ ಸಂಬಂಧವನ್ನು ಕಡಿದುಕೊಂಡಿರುವ ಅವರು ಆ.26ರಂದು ಪಕ್ಷದ ಎಲ್ಲ ಸ್ಥಾನಗಳಿಗೂ […]

ತಂದೆ ಪುಣ್ಯಭೂಮಿಗೆ ನಮನ ಸಲ್ಲಿಸಿ ರಾಹುಲ್ ಪಾದಯಾತ್ರೆ ಆರಂಭ

ಚೆನೈ, ಆ.22- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ತಮಿಳುನಾಡಿನ ಶ್ರೀಪೆರಂಬೂರಿನಲ್ಲಿರುವ ತಮ್ಮ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಭೂಮಿಗೆ ನಮನ ಸಲ್ಲಿಸಿದ ಬಳಿಕ ಭಾರತ್ ಜೋಡೋ ಯಾತ್ರೆ ಆರಂಭಿಸಲಿದ್ದಾರೆ. 1991ರ ಮೇ 21ರಂದು ಶ್ರೀಪೆರಂಬೂರಿನಲ್ಲಿ ಧನು ಎಂಬುವರು ಆತ್ಮಾಹತ್ಯಾ ದಾಳಿ ನಡೆಸಿದ್ದರಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾಗಿತ್ತು. ಆ ಸ್ಥಳಕ್ಕೆ ರಾಹುಲ್‍ಗಾಂಧಿ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ ಎಂದು ತಮಿಳುನಾಡಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಕೆ.ಸೆಲ್ವಪೆರುಂತಗೈ ತಿಳಿಸಿದ್ದಾರೆ. ಸೆಪ್ಟಂಬರ್ 7ರಂದು […]

ಕಾಂಗ್ರೆಸ್ ಚುನಾವಣಾ ತಾಲೀಮು ಆರಂಭ : ಪ್ರಚಾರ ಸಮಿತಿ ಕಾರ್ಯನಿರ್ವಹಣೆಗೆ ಚಾಲನೆ

ಬೆಂಗಳೂರು,ಆ.16- ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ತಾಲೀಮು ಆರಂಭಿಸಿದ್ದು, ಇಂದು ಪ್ರಚಾರ ಸಮಿತಿಯ ಕಾರ್ಯನಿರ್ವಹಣೆಗೆ ಚಾಲನೆ ನೀಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ದೃವ ನಾರಾಯಣ್, ರಾಮಲಿಂಗಾರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಪ್ರಚಾರ ಸಮಿತಿ ಕಚೇರಿ ಉದ್ಘಾಟನೆ ಬಳಿಕ ಹಿರಿಯ ನಾಯಕರು ಪ್ರತ್ಯೇಕವಾಗಿ ಸಭೆ ನಡೆಸಿ ರಣತಂತ್ರಗಳ ಕುರಿತು ಚರ್ಚೆ ನಡೆಸಿದ್ದಾರೆ. ದಾವಣಗೆರೆಯಲ್ಲಿ […]