ನಾಳೆಯಿಂದ ಬೆಂಗಳೂರಿನಲ್ಲಿ ಡಿಜಿಟಲ್ ರುಪಿ ಚಲಾವಣೆ

ನವದೆಹಲಿ,ನ.30- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈಗಾಗಲೇ ಪ್ರಕಟಿಸಿರುವಂತೆ ಡಿಜಿಟಲ್ ರುಪಿ ನಾಳೆಯಿಂದ ದೇಶದ ಆಯ್ದ ನಗರಗಳಲ್ಲಿ ಪ್ರಾಯೋಗಿಕವಾಗಿ ಚಲಾವಣೆಗೆ ಬರಲಿದೆ. ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಹೇಳಲಾದ ಡಿಜಿಟಲ್ ರುಪಿಯನ್ನು ಪ್ರಥಮ ಹಂತದಲ್ಲಿ 4 ಬ್ಯಾಂಕ್‍ಗಳು ಅನುಷ್ಠಾನಕ್ಕೆ ತರುತ್ತಿದೆ. ಕ್ರಿಪ್ಟೊ ಕರೆನ್ಸಿ ಮಾದರಿಯಲ್ಲಿರುವ ಡಿಜಿಟಲ್ ರುಪಿ ಸಾಂಪ್ರದಾಯಿಕ ನೋಟು ಮತ್ತು ನಾಣ್ಯಗಳ ಮುಖಬೆಲೆಯನ್ನೇ ಹೊಂದಿರಲಿದೆ. ನಾಳೆ ಚಿಲ್ಲರೆ ಕ್ಷೇತ್ರದಲ್ಲಿ ಚಲಾವಣೆ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಸ್ […]

ಬಿಬಿಎಂಪಿಯಿಂದ ‘ನನ್ನ ನಗರ ನನ್ನ ಬಜೆಟ್’ ಅಭಿಯಾನಕ್ಕೆ ಚಾಲನೆ

ಬೆಂಗಳೂರು, ನ.24- ಘನತ್ಯಾಜ್ಯ ನಿರ್ವಹಣೆ, ರಸ್ತೆ, ಬೀದಿದೀಪ, ಮಳೆನೀರು ಕೊಯ್ಲು ಸೇರಿದಂತೆ ಮೂಲಭೂತ ಸೌಲಭ್ಯಗಳ ಕುರಿತು ನಾಗರಿಕರಿಂದ ಅಭಿಪ್ರಾಯ ಸಂಗ್ರಹಕ್ಕಾಗಿ ಹಮ್ಮಿಕೊಂಡಿರುವ ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕೆ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಚಾಲನೆ ನೀಡಿದರು. ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಾಲಿಕೆ ವಾರ್ಷಿಕ ಆಯವ್ಯಯದಲ್ಲಿ ನಾಗರಿಕರ ಸಹಭಾಗಿತ್ವ, ಹೆಚ್ಚಿನ ಪ್ರಮಾಣದಲ್ಲಿ ಆಗಬೇಕೆಂಬ ಉದ್ದೇಶದಿಂದ ಜನಾಗ್ರಹ ಸಂಸ್ಥೆಯು ನನ್ನ ನಗರ-ನನ್ನ ಬಜೆಟ್ ಅಭಿಯಾನವನ್ನು ಕಳೆದ ಏಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. […]