ಬಿಜೆಪಿ ಬಿಡಲ್ಲ : ಸಚಿವ ಸೋಮಣ್ಣ ಸ್ಪಷ್ಟನೆ

ಬೆಂಗಳೂರು,ಮಾ.14- ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರಲ್ಲ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ. ಯಾವುದೇ ಕಾರಣಕ್ಕೂ ನಾನು ಬಿಜೆಪಿಯನ್ನು ತ್ಯಜಿಸಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನಸಾರ್ವತ್ರಿಕ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಿದರೆ ಸ್ರ್ಪಧಿಸುತ್ತೇನೆ. ನೀಡದಿದ್ದರೆ ಪಕ್ಷದಲ್ಲೇ ದುಡಿಯುತ್ತೇನೆ ಎಂದು ಹೇಳುವ ಮೂಲಕ ಎಲ್ಲದ್ದಕ್ಕೂ ಈಗ ಇತಿಶ್ರೀ ಹಾಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನನ್ನ ಪುತ್ರ ಚುನಾವಣೆಯಲ್ಲಿ ಸ್ರ್ಪಧಿಸುವುದು ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದು, ಸಚಿವನಾಗಿ ನಾನು […]
ಸೋಮಣ್ಣ ಮುನಿಸು ತಣಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು,ಮಾ.9- ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದ ವಸತಿ ಸಚಿವ ವಿ.ಸೋಮಣ್ಣ ಅವರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಸಂಧಾನ ತಾತ್ಕಲಿಕವಾಗಿ ಯಶಸ್ವಿಯಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಅವರು ತಡರಾತ್ರಿ ಸೋಮಣ್ಣ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ಆರ್‍ಟಿನಗರ ನಿವಾಸಕ್ಕೆ ಕರೆದೋಯ್ದು ನಡೆಸಿದ ಮಾತುಕತೆ ಫಲಪ್ರದ ವಾಗಿದೆ. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯಲ್ಲಿ ಏನೇ ಅಸಮಾಧಾನ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷ ವೇದಿಕೆಯಲ್ಲಿ ಕುರಿತು ಇತ್ಯರ್ಥಪಡಿಸಿಕೊಳ್ಳೋಣ. ಪಕ್ಷ ಬಿಡುವ ತೀರ್ಮಾನದಿಂದ ಹಿಂದೆ ಸರಿಯಬೇಕೆಂದು ಸಿಎಂ […]
ಮಗುವನ್ನು ನಿಲ್ದಾಣದಲ್ಲೇ ಬಿಟ್ಟು ವಿಮಾನ ಹತ್ತಲು ಮುಂದಾದ ದಂಪತಿ

ಟೆಲ್‍ಅವಿವ್,ಫೆ.2- ವಿಮಾನಪ್ರಯಾಣದ ಸಂದರ್ಭದಲ್ಲಿ ಮಗುವಿಗೆ ಟಿಕೆಟ್ ಇಲ್ಲದ ದಂಪತಿ ತಮ್ಮ ಕರುಳ ಕುಡಿಯನ್ನೇ ನಿಲ್ದಾಣದಲ್ಲಿ ಬಿಟ್ಟು ಫ್ಲೈಟ್ ಹತ್ತಲು ಹೋದ ವಿಲಕ್ಷಣ ಘಟನೆ ಇಸ್ರೇಲ್‍ನಲ್ಲಿ ನಡೆದಿದೆ. ದಂಪತಿ ಬೆಲ್ಜಿಯಂನ ಬ್ರಸೆಲ್ಸ್‍ಗೆ ಪ್ರಯಾಣ ಬೆಳೆಸಲು ತಮ್ಮ ಮಗುವಿನೊಂದಿಗೆ ಟೆಲ್‍ಅವಿವ್ ವಿಮಾನ ನಿಲ್ದಾಣಕ್ಕೆ ಬಂದರು. ಆದರೆ, ಮಗುವಿಗೆ ಟಿಕೆಟ್ ತೆಗೆದುಕೊಂಡಿರಲಿಲ್ಲ. ವಿಮಾನ ನಿಲ್ದಾಣದ ಸಿಬ್ಬಂದಿಗಳು ಮಗುವಿಗೆ ಟಿಕೆಟ್ ಕಡ್ಡಾಯ ಎಂದಾಗ ವಿಲಕ್ಷಣ ಮನೋಭಾವದ ದಂಪತಿ ಇನ್ನೊಂದು ಟಿಕೆಟ್ ಖರೀದಿಸುವ ಬದಲು ಮಗುವನ್ನು ಚೆಕ್ ಇನ್ ಕೌಂಟರ್‍ನಲ್ಲೇ ಬಿಟ್ಟು ವಿಮಾನ ಹತ್ತಲು […]
ವಿಮ್ಸ್ ಆಸ್ಪತ್ರೆ ರೋಗಿಗಳ ಸಾವಿನ ಪ್ರಕರಣ: ನಿರ್ಲಕ್ಷ್ಯ ಅಧಿಕಾರಿಗಳ ಅಮಾನತು
ಬೆಂಗಳೂರು,ಸೆ.18- ತೀವ್ರ ವಿವಾದ ಸೃಷ್ಟಿಸಿರುವ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ರೋಗಿಗಳ ಸಾವಿನ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತುಪಡಿಸಲು ಸರ್ಕಾರ ತೀರ್ಮಾನಿಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ತನಿಖಾ ಸಮಿತಿ ವರದಿ ಸರ್ಕಾರದ ಕೈ ಸೇರುತ್ತಿದ್ದಂತೆ ಉದಾಸೀನ ತೋರಿರುವ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಮೇಲ್ನೋಟಕ್ಕೆ ವಿಮ್ಸ್‍ನಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ಮತ್ತು ಆಡಳಿತ ಮಂಡಳಿಯ ಉದಾಸೀನದಿಂದಲೇ ಬಡ ರೋಗಿಗಳು ಸಾವನ್ನಪ್ಪಿರುವುದು ಕಂಡುಬರುವುದರಿಂದ ವೈದ್ಯರಿಗೆ ಬಿಸಿ […]