ಅಸ್ಸಾಂನಲ್ಲಿ ಬಿಜೆಪಿ-ಬಿಪಿಎಫ್ ಶಾಸಕಾಂಗ ಪಾಲುದಾರಿಕೆಯಿದೆ : ಹಿಮಂತ ಶರ್ಮಾ

ಗುವಾಹಟಿ, ಜ.24- ಅಸ್ಸಾಂನ ಆಡಳಿತಾರೂಢ ಬಿಜೆಪಿಯು ಶಾಸಕಾಂಗ ಪಕ್ಷದ ಮಟ್ಟದಲ್ಲಿ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ನೊಂದಿಗೆ ಮೈತ್ರಿ ಹೊಂದಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಬಿಜೆಪಿ ಶಾಸಕಾಂಗ ಪಕ್ಷವು ಬಿಪಿಎಫ್ ಶಾಸಕಾಂಗ ಪಕ್ಷವನ್ನು ವಿಧಾನಸಭೆಯಲ್ಲಿ ಪಾಲುದಾರ ಎಂದು ಒಪ್ಪಿಕೊಂಡಿದೆ. ಆಡಳಿತಾತ್ಮಕವಾಗಿ ತಳಮಟ್ಟದಲ್ಲೂ ಸಮನ್ವಯತೆಯನ್ನು ಹೊಂದಿವೆ ಮತ್ತು ಸದನದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ಆದರೆ ರಾಜಕೀಯವಾಗಿ ಬಿಪಿಎಫ್ನೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಬಿಪಿಎಫ್, ಕಾಂಗ್ರೆಸ್ ಮತ್ತು […]