ರಾಜ್ಯದ ಕೆಲವೆಡ ಅಕಾಲಿಕ ಮಳೆ ಸಾಧ್ಯತೆ

ಬೆಂಗಳೂರು, ಜ.31-ಬಂಗಾಳಕೊಲ್ಲಿಯಲ್ಲಿ ಲಘು ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದ ಕೆಲವೆಡೆ ಚದುರಿದಂತೆ ಅಕಾಲಿಕ ಮಳೆಯಾಗುವ ಸಾಧ್ಯತೆಗಳಿವೆ. ಭಾಗಶಃ ಮೋಡ ಕವಿದ ವಾತಾವರಣ ಎರಡು ಮೂರು ದಿನಗಳ ಕಾಲ ಕಂಡು ಬರಲಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಪ್ರಬಲವಾಗುವ ಲಕ್ಷಣಗಳಿಲ್ಲ. ಹೀಗಾಗಿ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಒಂದೆರಡು ಕಡೆ ಮಳೆಯಾಗಬಹುದು. ಆದರೆ, ವ್ಯಾಪಕ ಪ್ರಮಾಣದ ಮಳೆಯಾಗುವ ಲಕ್ಷಣಗಳಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಬೆಂಗಳೂರು, […]

ವಾಯು ಪಡೆ ಸೇರಿದ HAL ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್

ನವದೆಹಲಿ,ಅ. 3 – ಭಾರತೀಯ ವಾಯುಪಡೆಯ ಬತ್ತಳಿಕೆಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್ ಸೇರ್ಪಡೆಗೊಂಡಿದೆ. ಬಹುಪಾತ್ರದ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಹಾರಿಸುವ ಸಾಮಥ್ರ್ಯ ಹೊಂದಿರುವ ಲಘು ಯುದ್ಧ ಹೆಲಿಕಾಪ್ಟರ್(ಎಲ್‍ಸಿಎಚ್)ಅನ್ನು ಹಿಂದೂಸ್ತಾನ್ ಏರೋನೊಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಅಭಿವೃದ್ಧಿಪಡಿಸಿ ಹಲವಾರು ಪ್ರಯೋಗ, ಪರೀಕ್ಷೆ ನಂತರ ಇಂದು ವಾಯುಪಡೆಗೆ ಮೊದಲ ಲಘು ಯುದ್ಧ ಹೆಲಿಕಾಪ್ಟರ್‍ನ್ನು ಸೇರಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಾಯುಪಡೆ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರ ಉಪಸ್ಥಿತಿಯಲ್ಲಿ ಜೋಧ್‍ಪುರದಲ್ಲಿ ನಡೆದ ಸಮಾರಂಭದಲ್ಲಿ ಇದನ್ನು […]

ಚೀನಾ ಗಡಿಯಲ್ಲಿ ಯುದ್ಧ ಟ್ಯಾಂಕರ್ ಗಳನ್ನು ನಿಯೋಜಿಸಿದ ಭಾರತ

ನವದೆಹಲಿ,ಆ.27- ಚೀನಾ-ಭಾರತ ಗಡಿಭಾಗದಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಭಾರತ ಹಗುರವಾದ ಟ್ಯಾಂಕರ್‍ಗಳು, ಶಸ್ತ್ರಸಜ್ಜಿತ ಡ್ರೋಣ್‍ಗಳ ಸಮೂಹವನ್ನು ನಿಯೋಜಿಸಿದೆ. ಚೀನಾದಿಂದ ಭವಿಷ್ಯದಲ್ಲಿ ಬಲವಂತವಾಗಿ ಎದುರಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ, ಪ್ರಾಜೆಕ್ಟ್ ಜೋರ್‍ವಾರ್ ಶುರು ಮಾಡಿದೆ. ಸುಮಾರು 350ಕ್ಕೂ ಹೆಚ್ಚಿನ ದೇಶಿ ನಿರ್ಮಿತ ಹಗುರವಾದ ಟ್ಯಾಂಕರ್‍ಗಳನ್ನು ಗಡಿಭಾಗದಲ್ಲಿ ಸಜ್ಜುಗೊಳಿಸಲಾಗಿದೆ. ಇವು ಅತಿವೇಗವಾಗಿ ಚಲಿಸುವುದಲ್ಲದೆ ಸುಲಭವಾಗಿ ಮತ್ತು ಸಂಚಲನಾತ್ಮಕವಾಗಿ ಪರ್ವತಶ್ರೇಣಿಗಳಲ್ಲಿ ಕಾರ್ಯ ನಿರ್ವಹಿಸಬಲ್ಲವಾಗಿವೆ. ವಾಯುಮಾರ್ಗದಲ್ಲಿ ನಿಗಾವಹಿಸಲು ನವೋದ್ಯಮ ಸಂಸ್ಥೆಯೊಂದರ ಮೂಲಕ ಸಜ್ಜುಗೊಳಿಸಲಾದ ಶಸ್ತ್ರ ಸಜ್ಜಿತ ಡ್ರೋಣ್‍ಗಳನ್ನು ನಿಯೋಜಿಸಲಾಗಿದೆ. ಸ್ವಾಯತ್ತ ನಿಗಾವಣೆ ಮತ್ತು […]

ಭಾರತದಿಂದ ಲಘು ಹೆಲಿಕಾಪ್ಟರ್‌ ಖರೀದಿಗೆ ಮುಂದಾದ ಫಿಲಿಪೈನ್ಸ್

ನವದೆಹಲಿ, ಜುಲೈ 17 -ಫಿಲಿಪೈನ್ಸ್ ತನ್ನ ಯುದ್ಧ ಸಾಮಥ್ರ್ಯವನ್ನು ಹೆಚ್ಚಿಸಲು ಭಾರತದಿಂದ ಸುಧಾರಿತ ಲಘು ಹೆಲಿಕಾಪ್ಟರ್‍ಗಳನ್ನು ಖರೀದಿಸಲು ಮುಂದಾಗಿದೆ. ಆಗ್ನೇಯ ಏಷ್ಯಾದ ದ್ವೀಪ ರಾಷ್ಟ್ರ ಇತ್ತೀಚೆಗೆ ಭರಿ ಭದ್ರತಾ ಸವಾಲುಗಳನ್ನು ಎದುರಿಸುತಿದ್ದು ಅದನ್ನು ಸಮರ್ಥವಾಗಿ ನಿಭಾಯಿಸಲು ಸೇನಾ ಪಡೆಯನ್ನು ಆಧುನೀಕರಿಸುವತ್ತ ಗಮನಹರಿಸುತ್ತಿದೆ. ದಕ್ಷಿಣ ಸಮುದ್ರದಲ್ಲಿ ಚೀನಾದೊಂದಿಗೆ ದಶಕಗಳ ಕಾಲದಿಂದ ನಡೆಯುತಿರುವ ಪ್ರಾದೇಶಿಕ ವಿವಾದಕ್ಕೆ ತನ್ನದೇ ಆದ ದಿಟ್ಟ ನಿಲುವಿಗೆ ಫಿಲಿಪೈನ್ಸïಮುಂದಾಗಿದೆ. ಹಳೆಯ ಹೆಲಿಕಾಪ್ಟರ್ ಫ್ಲೀಟ್ ಬದಲಿಸಿ ಹಲವಾರು ಸುಧಾರಿತ ಭಾರತದ ಲಘು ಹೆಲಿಕಾಪ್ಟರ್‍ಗಳನ್ನು (ಎಎಲ್ಎಚ್) ಖರೀದಿಸಲು ತೀವ್ರ […]