ವಿದ್ಯುತ್ ತಗುಲಿ ಲೈನ್‍ಮೆನ್ ಸಾವು

ಬೆಂಗಳೂರು, ಜ.23- ಟ್ರಾನ್ಸ್‍ಫಾರಂನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಕರ್ತವ್ಯದಲ್ಲಿದ್ದ ಲೈನ್‍ಮೆನ್‍ವೊಬ್ಬರು ಟ್ರಾನ್ಸ್‍ಫಾರಂ ಹತ್ತಿದಾಗ ಕೈಗೆ ವಿದ್ಯುತ್ ತಗಲಿ ಕೆಳಗೆ ಬಿದ್ದು, ಮೃತಪಟ್ಟಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಸುಂಕದಕಟ್ಟೆಯ ನಿವಾಸಿ ಗೌತಮ್(26) ಮೃತಪಟ್ಟ ಲೈನ್‍ಮೆನ್. ಇವರು ಮೂಲತಃ ಮಾಗಡಿ ತಾಲೂಕಿನವರು.ಗೋಪಾಲಪುರದ ಪೊಲೀಸ್ ಚೌಕಿ ಬಳಿಯ ಟ್ರಾನ್ಸ್‍ಫಾರಂನಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿಬೆಂಕಿ ಕಾಣಿಸಿಕೊಂಡಿದೆ. ಆ ವೇಳೆ ಸಾರ್ವಜನಿಕರು ನೋಡಿ ತಕ್ಷಣ ಅಂಜನಾ ಚಿತ್ರ ಮಂದಿರದ ಬಳಿ ಇರುವ ಬೆಸ್ಕಾಂಗೆ […]