ಅಂಬ್ರೋನಾಲ್, ಡಾಕ್-1 ಕಾಫ್ ಸಿರಫ್ ಬಳಕೆ ನಿಷೇಧ

ಜಿನೀವಾ,ಜ.12- ಭಾರತದ ಮೂಲದ ಬಯೋಟೆಕ್ ಸಂಸ್ಥೆ ತಯಾರಿಸಿರುವ ಎರಡು ಕೆಮ್ಮಿನ ಸಿರಪ್ಗಳನ್ನು ಮಕ್ಕಳ ಮೇಲೆ ಬಳಕೆ ಮಾಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಸಂಸ್ಥೆ ತಯಾರಿಸಿರುವ ಕೆಮ್ಮಿನ ಸಿರಪ್ಗಳು ಗುಣಮಟ್ಟದ ಮಾನದಂಡಗಳನ್ನು ಹಾಗೂ ವಿಶೇಷಣಗಳನ್ನು ಪೂರೈಸಲು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂಬ್ರೋನಾಲ್ ಹಾಗೂ ಡಾಕ್-1 ಕಾಫ್ ಸಿರಫ್ಗಳನ್ನು ಸೇವಿಸಿದ ಮಕ್ಕಳು ಸಾವನ್ನಪ್ಪಿದ ನಂತರ ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಧಾರ ಕೈಗೊಂಡಿರುವುದರಿಂದ […]
ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ 8 ಶಂಕಿತರ ಬಂಧನ

ಲಕ್ನೋ/ಹರಿದ್ವಾರ, ಅ. 12-, ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ಅಧಿಕಾರಿಗಳು ಭಾರತದಲ್ಲಿ ಅಲï-ಖೈದಾ ಮತ್ತು ಅದರ ಅಂಗಸಂಸ್ಥೆ ಜಮಾತ್-ಉಲ್-ಮುಜಾಹಿದ್ದೀನ್ನೊಂದಿಗೆ ಸಂಪರ್ಕ ಹೊಂದಿದ್ದ ಎಂಟು ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ. ಎಂಟು ಮಂದಿಯನ್ನು ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ ಎಂದು ಯುಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ಬಂಧಿತ ಶಂಕಿತರನ್ನು ಲುಕ್ಮಾನ್, ಮನೋಹರಪುರದ ಗಗಲ್ಹೆಡಿ ಕಾರಿ ಮುಖ್ತಾರ್ನ ಮೊಹಮ್ಮದ್ ಅಲಿಮ, ದಿಯೋಬಂದ್ನ ಕಾಮಿಲ, ಎಲ್ಲರೂ ಸಹರಾನ್ಪುರ ಜಿಲ್ಲಾಯವರು; […]
ಬಾಂಗ್ಲಾ, ಪಾಕ್, ಅಫ್ಘಾನ್, ಕಾಶ್ಮೀರ ವ್ಯಕ್ತಿಗಳೊಂದಿಗೆ ಶಂಕಿತ ಉಗ್ರ ಅಖ್ತರ್ ಹುಸೇನ್ ಲಿಂಕ್
ಬೆಂಗಳೂರು, ಜು.27- ಶಂಕಿತ ಉಗ್ರ ಅಖ್ತರ್ ಹುಸೇನ್ ಬಾಂಗ್ಲಾದೇಶ, ಪಾಕಿಸ್ತಾನ, ಆಪ್ಘಾನಿಸ್ತಾನ ದೇಶಗಳು ಹಾಗೂ ಕಾಶ್ಮೀರದ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿದ್ದ ಎಂಬುವುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈತನ ಮೊಬೈಲ್ನ್ನು ಪರಿಶೀಲಿಸಿದಾಗ ಕೆಲವು ಸೋಟಕ ಮಾಹಿತಿಗಳು ಲಭ್ಯವಾಗಿದ್ದು , ಐದಾರು ಗ್ರೂಪ್ಗಳನ್ನು ಮಾಡಿಕೊಂಡು ಒಂದೊಂದು ಗ್ರೂಪ್ನಲ್ಲಿ 20 ರಿಂದ 25 ಮಂದಿ ಸೇರ್ಪಡೆ ಮಾಡಿ ಅವರುಗಳ ಸಂಪರ್ಕದಲ್ಲಿದ್ದುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಶಂಕಿತ ಉಗ್ರ ಅಖ್ತರ್ನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಾಗ ಆತನ ಬಳಿಯಿದ್ದ ಮೊಬೈಲ್ಗಳಲ್ಲಿನ ಕೆಲವು […]