ವಿಮಾನ ನಿಲ್ದಾಣ, ಸೂಪರ್ ಮಾರ್ಕೆಟ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ

ಭೋಪಾಲ್, ಜ.19- ಮುಂದಿನ ಹಣಕಾಸು ವರ್ಷಕ್ಕೆ ನೂತನ ಅಬಕಾರಿ ನೀತಿಯಲ್ಲಿ ಮಧ್ಯಪ್ರದೇಶ ಸರ್ಕಾರವು ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮತ್ತು ಬೃಹತ್ ನಗರಗಳಲ್ಲಿನ ಆಯ್ದ ಸೂಪರ್ ಮಾರ್ಕೆಟ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ನಿರ್ಧರಿಸಿದೆ. ನೂತನ ಅಬಕಾರಿ ನೀತಿ 2022-23ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಸರ್ಕಾರ ಸಹ ಈ ನಿಇತಿಯನ್ನು ಪ್ರಾಯೋಗಿಕವಾಗಿಸಲು ಮದ್ಯದ ಚಿಲ್ಲರೆ ಮಾರಾಟದ ಬೆಲೆಯನ್ನು ಶೇ.20ರಷ್ಟು ಇಳಿಸಲು ತೀರ್ಮಾನಿಸಿದೆ. ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಮಧ್ಯ ಪ್ರದೇಶ […]