ರಾಜ್ಯದಲ್ಲಿ ಮತ್ತೆ ತಲೆ ಎತ್ತಿದ ನಕಲಿ ಮದ್ಯದ ಹಾವಳಿ

#ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು, ಜ.18- ಸೆಕೆಂಡ್ಸ್  ಮದ್ಯದ ಹಾವಳಿ ತಡೆಗಟ್ಟಿ ದಶಕ ಕಳೆದರೂ ಇದೀಗ ಅದನ್ನು ಮೀರಿಸುವ ನಕಲಿ ಮದ್ಯದ ಜಾಲ ರಾಜ್ಯಾದ್ಯಂತ ವ್ಯವಸ್ಥಿತವಾಗಿ ಹಬ್ಬುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಪ್ರಭಾವಿಗಳೇ ಕಿಂಗ್ ಪಿನ್‍ಗಳಾಗಿ ಈ ನಕಲಿ ಮದ್ಯದ ಜಾಲವನ್ನು ನಡೆಸುತ್ತಿದ್ದು, ಮೊದಲ ಹಂತದಲ್ಲಿ ರಾಜ್ಯದ ಪ್ರಮುಖ ನಗರ ಪ್ರದೇಶಗಳನ್ನು ಈ ನಕಲಿ ಮದ್ಯ ಆವರಿಸುತ್ತಿದೆ. ಅದರಲ್ಲೂ ದುಬಾರಿ ಬೆಲೆಯ ಮದ್ಯದ ಬ್ರಾಂಡ್‍ಗಳನ್ನು ನಕಲು ಮಾಡಲಾಗುತ್ತಿದ್ದು, ಇದು ಮಿಲ್ಟ್ರಿ ಕ್ಯಾಂಟೀನ್ ದಾಸ್ತಾನು ಎಂಬಂತೆ ಪ್ರತಿಬಿಂಬಿಸಿ ಮಾರಾಟ ಮಾಡಲಾಗುತ್ತಿದೆ. […]