‘ಸಪ್ತ ಋಷಿ ಮಂತ್ರ’ ಪಠಿಸಿದ ನಿರ್ಮಲಾ ಸೀತರಾಮನ್

ನವದೆಹಲಿ,ಫೆ.1- ಈ ಬಾರಿಯ ಬಜೆಟ್‍ನಲ್ಲಿ ಸಪ್ತ ಋಷಿ ಮಂತ್ರ ಪಠಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಮುಖವಾಗಿ ಏಳು ವಲಯಗಳಿಗೆ ಆದ್ಯತೆ ನೀಡಿದ್ದಾರೆ. ಬಜೆಟ್ ಪ್ರಾರಂಭದಲ್ಲೇ ಸಪ್ತಋಷಿ ಮಂತ್ರ ಪಠಿಸಿದ ಅವರು, ತಮ್ಮ ಬಜೆಟ್‍ನಲ್ಲಿ ಅಂತರ್ಗತ ಅಭಿವೃದ್ಧಿ, ಕೊನೆಯ ಮೈಲಿಯವರೆಗೂ ಸಂಪರ್ಕ, ಮೂಲಸೌಕರ್ಯ ಮತ್ತು ಹೂಡಿಕೆ, ಸುಪ್ತ ಸಾಮಥ್ರ್ಯವನ್ನು ಹೊರಹಾಕುವುದು, ಹಸಿರು ಬೆಳವಣಿಗೆ, ಯುವಶಕ್ತಿ ಮತ್ತು ಹಣಕಾಸು ವಲಯವನ್ನು ಬಲಪಡಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಹೇಳಿದರು. ಭಾರತದ ಆರ್ಥಿಕತೆ ಸರಿಯಾದ ಹಾದಿಯಲ್ಲಿದ್ದು, ಉಜ್ವಲ ಭವಿಷ್ಯದತ್ತ ಸಾಗುತ್ತಿದೆ. […]