ತಿಂಗಳುಗಟ್ಟಲೆ ತಾಯಿಯ ಶವ ಬಚ್ಚಿಟ್ಟಿದ್ದ ಮಗಳು

ಮುಂಬೈ,ಮಾ.15- ಮಗಳು ತನ್ನ ತಾಯಿಯ ಶವವನ್ನು ತಿಂಗಳುಗಟ್ಟಲೆ ಪ್ಲಾಸ್ಟಿಕ್ ಚೀಲದಲ್ಲಿ ಬಚ್ಚಿಟ್ಟಿದ್ದ ಆಘಾತಕಾರಿ ಘಟನೆ ಮುಂಬೈನ ಲಾಲ್‍ಭಾಗ್ ಪ್ರದೇಶದಲ್ಲಿ ನಡೆದಿದೆ. 53 ವರ್ಷದ ಮಹಿಳೆಯ ಶವ ಪ್ಲಾಸ್ಟಿಕ್ ಚೀಲದೊಳಗೆ ಪತ್ತೆಯಾಗಿದ್ದು, ಶವವನ್ನು ತಿಂಗಳುಗಟ್ಟಲೆ ಬಚ್ಚಲಲ್ಲಿ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯ ಮಗಳು 21 ವರ್ಷದವಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮೃತ ಮಹಿಳೆಯ ಸಹೋದರ ಮತ್ತು ಸೋದರಳಿಯ ನಿನ್ನೆ ಕಲಾಚೌಕಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು ಎಂದು ಡಿಸಿಪಿ ಪ್ರವೀಣ್ ಮುಂದೆ ತಿಳಿಸಿದ್ದಾರೆ. ಮಹಿಳೆ ವಾಸಿಸುತ್ತಿದ್ದ […]

ದೇಶದಲ್ಲಿದ್ದಾರೆ 10ಸಾವಿರಕ್ಕೂ ಹೆಚ್ಚು ಬೀದಿಮಕ್ಕಳು

ನವದೆಹಲಿ,ಫೆ.11- ದೇಶದಲ್ಲಿ 10,000 ಕ್ಕೂ ಹೆಚ್ಚು ಮಕ್ಕಳು ತಮ್ಮ ಕುಟುಂಬಗಳೊಂದಿಗೆ ಬೀದಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತಿಳಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಅವರು ಬಾಲ್ ಸ್ವರಾಜ್ ಪೋರ್ಟಲ್‍ನಿಂದ ಡೇಟಾವನ್ನು ಒದಗಿಸಿದ್ದಾರೆ, ಇದು ದೇಶದ ಬೀದಿ ಪರಿಸ್ಥಿತಿಗಳಲ್ಲಿ ವಾಸಿಸುವ ಮಕ್ಕಳನ್ನು ಎಣಿಸುತ್ತದೆ. ಕಳೆದ 8 ವರ್ಷದಿಂದ ದೇಶ ಶಾಂತಿಯುತವಾಗಿದೆ : ಅಮಿತ್ ಶಾ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಬೀದಿ ಬದಿಗಳಲ್ಲಿ 19,546 ಮಕ್ಕಳು […]

ಪ್ರೇಯಸಿಯ ಕೊಲೆಯಲ್ಲಿ ಕೊನೆಯಾಯ್ತು ಲಿವಿಂಗ್ ಟುಗೆದರ್ ಲವ್

ಬೆಂಗಳೂರು, ನ.30- ಸಹಜೀವನ ನಡೆಸುತ್ತಿದ್ದ ಪ್ರಿಯಕರ ತನ್ನ ಪ್ರೇಯಸಿಯನ್ನು ಕೊಲೆ ಮಾಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ನೇಪಾಳ ಮೂಲದ ಕೃಷ್ಣಕುಮಾರಿ(23) ಕೊಲೆಯಾಗಿರುವ ನತದೃಷ್ಟೆ. ಆರೋಪಿ ಸಂತೋಷ್ ದಾಬೆ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕೈಗೊಂಡಿದ್ದಾರೆ. ನೇಪಾಳ ಮೂಲದವರಾದ ಕೃಷ್ಣಕುಮಾರಿ ಹಾಗೂ ಸಂತೋಷ್ ದಾಬೆ ಇಬ್ಬರು ಪ್ರೀತಿಸುತ್ತಿದ್ದು, ಟಿ.ಸಿ ಪಾಳ್ಯ ರಸ್ತೆಯ ಮುನೇಶ್ವರ ನಗರದ ಕಟ್ಟಡವೊಂದರ ನಾಲ್ಕನೇ ಮಹಡಿಯ ರೂಮ್‍ನಲ್ಲಿ ವಾಸವಾಗಿದ್ದು,ಸಹಜೀವನ (ಲಿವಿಂಗ್ ಟು ಗೆದರ್) ನಡೆಸುತ್ತಿದ್ದರು. ಹೊರಮಾವು ಬಳಿ ಕೃಷ್ಣಕುಮಾರಿ ಬ್ಯೂಟಿಪಾರ್ಲರ್ […]