ಬೈಕ್ ಅಪಘಾತ, ಎಲ್‍ಎಲ್‍ಬಿ ವಿದ್ಯಾರ್ಥಿ ಸಾವು
ಬೆಂಗಳೂರು, ಸೆ.19- ಸ್ನೇಹಿತನ ಮನೆಗೆ ಬುಲೆಟ್ ಬೈಕ್‍ನಲ್ಲಿ ಊಟಕ್ಕೆ ಹೋಗುತ್ತಿದ್ದಾಗ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಹಾಲಿನ ಟ್ಯಾಂಕರ್‍ಗೆ ಅಪ್ಪಳಿಸಿ ಉರುಳಿಬಿದ್ದ ಪರಿಣಾಮ ಎಲ್‍ಎಲ್‍ಬಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಲಿಂಗರಾಜಪುರದ ನಿವಾಸಿ, ಎಲ್‍ಎಲ್‍ಬಿ ವ್ಯಾಸಂಗ ಮಾಡುತ್ತಿದ್ದ ಅರ್ಷಾ ಅನ್ವರ್ (20) ಮೃತಪಟ್ಟ ದುರ್ದೈವಿ.ರಾತ್ರಿ 8 ಗಂಟೆ ಸುಮಾರಿನಲ್ಲಿ ಅರ್ಷಾ ಅನ್ವರ್ ತನ್ನ ಬುಲೆಟ್ ಬೈಕ್‍ನಲ್ಲಿ ವಿಲ್ಸನ್ ಗಾರ್ಡನ್‍ಗೆ ಹೋಗಿ […]